ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಪ್ರಸಾದದಲ್ಲಿ ಗುಟ್ಕಾ ಪತ್ತೆ..? ಭಕ್ತೆ ಮಾಡುತ್ತಿರುವ ಆರೋಪವೇನು..?

ನ್ಯೂಸ್‌ ನಾಟೌಟ್‌: ತೆಲಂಗಾಣದ ಖಮ್ಮಂ ಜಿಲ್ಲೆಯ ಭಕ್ತೆಯೊಬ್ಬರು ತಿರುಪತಿ ಲಡ್ಡು ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ, ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ತಮ್ಮ ಮನೆಗೆ ತಂದ ಪ್ರಸಾದದಲ್ಲಿ, ಕಾಗದದಲ್ಲಿ ಸುತ್ತಿಟ್ಟಿರುವ ತಂಬಾಕು ತುಂಡುಗಳು ಪತ್ತೆಯಾಗಿವೆ ಎಂದು ಆರೋಪಿಸಿದ್ದಾರೆ. ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿರುವ ವಿವಾದದ ನಡುವೆಯೇ ಈ ಘಟನೆ ಬೆಳಕಿಗೆ ಬಂದಿದೆ.ಗೊಲ್ಲಗುಡೆಂ ಪಂಚಾಯತ್‌ ನ ಕಾರ್ತಿಕೇಯ ಟೌನ್‌ಶಿಪ್‌ನ ನಿವಾಸಿ ದೊಂತು ಪದ್ಮಾವತಿ ಎಂಬವರು ಸೆಪ್ಟೆಂಬರ್ 19ರಂದು ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಳಿಕ ನೆರೆಮನೆಯವರಿಗೆ ಹಂಚಲೆಂದು ಲಡ್ಡು ತೆಗೆದುಕೊಂಡು ಮನೆಗೆ ತೆರಳಿದ್ದರು. ಪ್ರಸಾದ ರೂಪದಲ್ಲಿ ತಂದಿದ್ದ ಲಡ್ಡುವಿನಲ್ಲಿ ಸಣ್ಣ ಪೇಪರ್‌ನಲ್ಲಿ ಕಟ್ಟಿದ್ದ ಗುಟ್ಕಾ ಪತ್ತೆಯಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೆಟ್ ಪತ್ತೆಯಾಗಿರುವುದು ಇದೇ ಮೊದಲಲ್ಲ. 2012ರಲ್ಲೂ ಲಡ್ಡು ಪ್ರಸಾದದಲ್ಲಿ ಗುಟ್ಕಾ ಪ್ಯಾಕೆಟ್ ಸಿಕ್ಕಿದ್ದ ಪ್ರಕರಣವೊಂದು ನಡೆದಿತ್ತು. ಈಗಾಗಲೇ ತುಪ್ಪದಲ್ಲಿ ಕಲಬೆರಕೆ ವಿಷಯ ವಿವಾದವಾಗಿದ್ದು, ಈ ಬೆನ್ನಲ್ಲೇ ಗುಟ್ಕಾ ಪತ್ತೆಯಾಗಿದೆ ಎಂಬ ಆರೋಪವೂ ಚರ್ಚೆಗೆ ಕಾರಣವಾಗಿದೆ. Click