ನ್ಯೂಸ್ ನಾಟೌಟ್: ತಿರುಪತಿ ಲಡ್ಡು ತಯಾರಿಸಲು ಬಳಸುವ ತುಪ್ಪದಲ್ಲಿ ದನದ ಕೊಬ್ಬು ಮತ್ತು ಮೀನಿನ ಎಣ್ಣೆಯನ್ನು (Fish Fat) ಬೆರೆಸಲಾಗಿದೆ ಎಂಬ ವರದಿಗಳನ್ನು ಟಿಡಿಪಿ (TDP) ಬಹಿರಂಗಪಡಿಸಿದೆ. ತಿರುಮಲ ಲಡ್ಡು ತಯಾರಿಸಲು ಬಳಸುವ ತುಪ್ಪದಲ್ಲಿ ಗೋಮಾಂಸವನ್ನು ಬೆರೆಸಲಾಗಿದೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದರು. ಇದೀಗ ಟಿಡಿಪಿ ಪುರಾವೆ ಸಹಿತ ಬಹಿರಂಗಪಡಿಸಿದೆ. ಈ ಆರೋಪ ಸತ್ಯ ಎಂದು ಹೇಳಿದೆ .
ಈ ಬಗ್ಗೆ ಟಿಡಿಪಿ ನಾಯಕ ಆನಂ ವೆಂಕಟ ರಮಣ ರೆಡ್ಡಿ ಅವರು ತುಪ್ಪವನ್ನು ಪರೀಕ್ಷಿಸಿದ ವಿವಿಧ ಪ್ರಯೋಗಾಲಯಗಳ ವರದಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ತಿರುಪತಿ ತಿರುಮಲ ದೇವಸ್ಥಾನಕ್ಕೆ ಪೂರೈಕೆಯಾಗುವ ತುಪ್ಪವನ್ನು ದೇಶದಲ್ಲೇ ಪ್ರಸಿದ್ಧವಾಗಿರುವ ಎನ್ಡಿಡಿಬಿ ಕ್ಯಾಲ್ಫ್ ಲ್ಯಾಬ್ನಲ್ಲಿ ಪರೀಕ್ಷಿಸಲಾಗಿದೆ. ಸೋಯಾಬೀನ್, ಕುಸುಬೆ, ಆಲಿವ್, ಗೋಧಿ ಹುರುಳಿ, ಹತ್ತಿ ಬೀಜಗಳು, ಮೀನಿನ ಎಣ್ಣೆ, ಬೀಫ್ , ತಾಳೆ ಎಣ್ಣೆ ಮತ್ತು ಹಂದಿ ಕೊಬ್ಬನ್ನು ಸಹ ಈ ತುಪ್ಪದಲ್ಲಿ ಬಳಸಲಾಗಿದೆ. ತಿರುಪತಿ ತಿರುಮಲ ದೇವಸ್ಥಾನಕ್ಕೆ ಗುತ್ತಿಗೆದಾರರು ಪೂರೈಸಿದ ತುಪ್ಪದಲ್ಲಿ ಶೇ.19ರಷ್ಟು ಮಾತ್ರ ತುಪ್ಪ ಇರುವುದು ಪತ್ತೆಯಾಗಿದೆ.
ಲಡ್ಡು ತಯಾರಿಕೆಯ ಗುತ್ತಿಗೆಯನ್ನು ಹಿಂದೂಯೇತರರಿಗೆ ನೀಡಲಾಗಿತ್ತು, ತಿರುಮಲ ಬೆಟ್ಟದಲ್ಲಿ ಅನ್ಯ ಕೋಮಿನ ಧರ್ಮ ಪ್ರಚಾರ ವ್ಯವಸ್ಥಿತವಾಗಿ ನಡೆಯುತ್ತಿತ್ತು. ಇದಕ್ಕೆಲ್ಲಾ, ನೇರ ಕಾರಣ ಅಂದಿನ ಸಿಎಂ ಆಗಿದ್ದ ವೈ.ಎಸ್.ಜಗನ್ ಎನ್ನುವ ಆರೋಪವನ್ನು ನಾಯ್ಡು ಮಾಡಿದ್ದರು, ಇದನ್ನು ಈಗ ಟಿಟಿಡಿ ಒಪ್ಪಿಕೊಂಡಿದೆ.
ತಿರುಪತಿಗೆ ಪ್ರಮುಖವಾಗಿ ಕರ್ನಾಟಕದಿಂದ ನಂದಿನಿ ತುಪ್ಪ ಸರಬರಾಜು ಮಾಡಲಾಗುತ್ತದೆ. ಆದರೆ 2020-24ರವರೆಗೆ ಟಿಟಿಡಿಯವರು ನಂದಿನಿ ತುಪ್ಪವನ್ನ ಸ್ಥಗಿತ ಮಾಡಿದ್ದರು ಎನ್ನಲಾಗಿದೆ.
Click