- +91 73497 60202
- [email protected]
- November 24, 2024 8:48 AM
ನ್ಯೂಸ್ ನಾಟೌಟ್ : ಕ್ಯಾಲಿಫೋರ್ನಿಯಾದ ಬ್ಯಾಪ್ಸ್ ಶ್ರೀ ಸ್ವಾಮಿ ನಾರಾಯಣ ಮಂದಿರವನ್ನು ಕಿಡಿಗೇಡಿಗಳು ಅಪವಿತ್ರಗೊಳಿಸಿ, ವಿರೂಪಗೊಳಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ದೇಗುಲದ ಗೋಡೆಗಳ ಮೇಲೆ ಹಿಂದೂ ವಿರೋಧಿ ಸಂದೇಶಗಳನ್ನು ಬರೆಯಲಾಗಿದೆ. 10 ದಿನಗಳ ಅಂತರದಲ್ಲಿ ಅಮೆರಿಕದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಈ ಕುರಿತಾಗಿ ಮಾಹಿತಿ ನೀಡಿರುವ ದೇಗುಲದ ವಕ್ತಾರರು, ದೇವಾಲಯದ ಗೋಡೆಗಳ ಮೇಲೆ ‘ಹಿಂದೂಗಳೇ ವಾಪಸ್ ಹೋಗಿ’ ಎಂದು ಸಂದೇಶ ಬರೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿರುವ ಬ್ಯಾಪ್ಸ್ ದೇಗುಲದ ವಕ್ತಾರರು, ‘ದ್ವೇಷದ ವಿರುದ್ಧ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಶಾಂತಿಗಾಗಿ ಪ್ರಾರ್ಥನೆ ಮಾಡುತ್ತೇವೆ’ ಎಂದು ಬರೆದುಕೊಂಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ‘ಕ್ಯಾಲಿಫೋರ್ನಿಯಾದ ಮಾಥರ್‌ನಲ್ಲಿ ಇರುವ ಬ್ಯಾಪ್ಸ್ ಹಿಂದೂ ದೇವಾಲಯದಲ್ಲಿ ವಿಧ್ವಂಸಕ ಕೃತ್ಯ ಎಸಗಲಾಗಿದ್ದು, ಇದನ್ನು ಕೋಮು ದ್ವೇಷದ ಅಪರಾಧ ಎಂದು ವರ್ಗೀಕರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಪ್ರಕರಣದ ಕುರಿತಾಗಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದುಷ್ಕರ್ಮಿಗಳು ದೇವಸ್ಥಾನವನ್ನು ವಿರೂಪಗೊಳಿಸಿರೋದಷ್ಟೇ ಅಲ್ಲ, ಈ ದೇಗುಲಕ್ಕೆ ಕಲ್ಪಿಸಲಾಗಿದ್ದ ನೀರಿನ ಸಂಪರ್ಕ ಮಾರ್ಗಗಳನ್ನೂ ಸಹ ಕತ್ತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ತನಿಖಾ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸಿದೆ ಎಂದು ಅಮೆರಿಕ ಕ್ಯಾಲಿಫೋರ್ನಿಯಾದ ಪೊಲೀಸ್ ಇಲಾಖೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ