ನ್ಯೂಸ್ ನಾಟೌಟ್: NASA ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ದ ಬಾಹ್ಯಾಕಾಶ ನೌಕೆ ಇಂದು (ಸೆಪ್ಟೆಂಬರ್ 7) ಭೂಮಿಗೆ ಮರಳಿದೆ. ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆ ನಿನ್ನೆ ಹೊರಟು ನ್ಯೂ ಮೆಕ್ಸಿಕೋ ಮರುಭೂಮಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ, ಆದರೆ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅಲ್ಲೆ ಉಳಿದಿದ್ದಾರೆ.
ಜೂನ್ ಮೊದಲ ವಾರದಲ್ಲಿ ಬೋಯಿಂಗ್ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆ ಬಾಹ್ಯಾಕಾಶಕ್ಕೆ ಕೊಂಡೊಯ್ದಿತ್ತು. ಬಳಿಕ ತಾಂತ್ರಿಕ ಸಮಸ್ಯೆ ಉಂಟಾಗಿ ಇಬ್ಬರೂ ಗಗನಯಾತ್ರಿಗಳು ಭೂಮಿಗೆ ಮರಳಲು ಸಾಧ್ಯವಾಗಲಿಲ್ಲ. ಇದೀಗ ಬಾಹ್ಯಾಕಾಶ ನೌಕೆಯು ಸಿಬ್ಬಂದಿ ಇಲ್ಲದೆ ಭೂಮಿಗೆ ವಾಪಸ್ಸಾಗಿದೆ. ತಾಂತ್ರಿಕ ಸಮಸ್ಯೆಗಳಿಂದ ಬಾಹ್ಯಾಕಾಶಕ್ಕೆ ಹಾರಿಹೋದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 2025ರ ಫೆಬ್ರವರಿಯವರೆಗೆ ಬಾಹ್ಯಾಕಾಶದಲ್ಲೇ ಇರುವಂತಾಗಿದೆ ಎಂದು ನಾಸಾ ತಿಳಿಸಿದೆ.
ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮುಂದಿನ ವರ್ಷ ಫೆಬ್ರವರಿಯಲ್ಲಿ ಭೂಮಿಗೆ ಹಿಂತಿರುಗಲಿದ್ದಾರೆ. ಸ್ಟಾರ್ಲೈನರ್ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಕಾಲಮಾನ ನಿನ್ನೆ ತಡರಾತ್ರಿ ಟೇಕ್ ಆಫ್ ಆಗಿತ್ತು. ಅದು ಇಂದು ಭೂಮಿಗೆ ತಲುಪಿದೆ. ಜಗತ್ತಿನ ವಿಜ್ಞಾನಿಗಳ ಕಣ್ಣು ಈ ಕಾರ್ಯಾಚರಣೆ ಮೇಲೆ ನೆಟ್ಟಿದೆ.
Click