ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘಿಸುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಯಾರು ನಿಯಮ ಉಲ್ಲಂಘಿಸಿ ನಡೆದುಕೊಂಡಿದ್ದಾರೋ ಅಂಥಹವರಿಗೆ ಪೊಲೀಸರು ದಂಡ ಹಾಕಿ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ.
ಸುಳ್ಯ ನಗರದಿಂದ ಸಂಪಾಜೆವರೆಗೆ ನೋ ಪಾರ್ಕಿಂಗ್ , ಹೆಲ್ಮೆಟ್ ಇಲ್ಲದೆ ದ್ವಿಚಕ್ರ ಚಾಲನೆ ಸೇರಿದಂತೆ ವಾಹನ ಸವಾರರ ವಿರುದ್ಧ ಒಟ್ಟು 750 ಸಂಚಾರಿ ನಿಯಮ ಉಲ್ಲಂಘನೆ ಕೇಸ್ ದಾಖಲಾಗಿದೆ. ಒಟ್ಟು 3,75,000 ರೂ. ದಂಡ ಸಂಗ್ರಹವಾಗಿದೆ ಎಂದು ಪೊಲೀಸ್ ಮೂಲಗಳು ನ್ಯೂಸ್ ನಾಟೌಟ್ ಗೆ ತಿಳಿಸಿವೆ. ವಾಹನ ಸವಾರರು ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿದರೆ ಅಥವಾ ಹೆಲ್ಮೆಟ್ ಹಾಕದ ಬೈಕ್ ಸವಾರಿ ಮಾಡಿದರೆ ಅಂಥಹವರ ಫೋಟೋ ತೆಗೆದು ಕೇಸ್ ದಾಖಲಿಸಲಾಗುತ್ತದೆ.
ಇದರಿಂದಾಗಿ ಇದೀಗ ನಡು ರಸ್ತೆಯಲ್ಲಿ ಪಾರ್ಕ್ ಮಾಡಿ ಹೋಗುವವರ ಸಂಖ್ಯೆ ಕಡಿಮೆ ಆಗಿದೆ. ಅಲ್ಲದೆ ದಂಡ ಬೀಳುವ ಹೆದರಿಕೆಯಿಂದ ಹೆಲ್ಮೆಟ್ ಧರಿಸದೆ ಈಗ ದ್ವಿಚಕ್ರವಾಹನ ಸವಾರರು ರಸ್ತೆಗೆ ಇಳಿಯುವುದೇ ಇಲ್ಲ. ಪೊಲೀಸರು ಇಂತಹ ಕೆಲಸವನ್ನು ಇಲ್ಲಿಗೆ ನಿಲ್ಲಿಸದೆ ಮುಂದುವರಿಸಿದರೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಇನ್ನೂ ಕಡಿಮೆ ಆಗಲಿದೆ ಎಂದು ನಾಗರಿಕರೊಬ್ಬರು ನ್ಯೂಸ್ ನಾಟೌಟ್ ಜೊತೆಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
Click