ನ್ಯೂಸ್ ನಾಟೌಟ್: ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ಕರ್ನಾಟಕ ಹಾಗೂ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಸಹಯೋಗದೊಂದಿಗೆ ಆಯೋಜಿಸಿರುವ ಮಂಗಳೂರು ವಿಭಾಗ ಅಂತರ್ ಕಾಲೇಜು ಫುಟ್ಬಾಲ್ ಕೂಟಕ್ಕೆ ಸೆ.3ರಂದು ಚಾಲನೆ ದೊರಕಿದೆ.
ಕೊಡಿಯಾಲಬೈಲ್ ನ ಗೌಡ ಸಮುದಾಯ ಭವನದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್(ರಿ.) ಸುಳ್ಯ ಇದರ ಅಧ್ಯಕ್ಷ ಡಾ| ಕೆ.ವಿ ಚಿದಾನಂದ ನಡೆಸಿದರು. ಈ ವೇಳೆ ಮಾತನಾಡಿದ ಅವರು, ‘ಕ್ರೀಡಾಸ್ಫೂರ್ತಿಯಿಂದ ಆಡಿ, ಬಹುಮಾನಕ್ಕಿಂತ ಭಾಗವಹಿಸುವಿಕೆ ಮುಖ್ಯ’ ಎಂದು ಶುಭ ಹಾರೈಸಿದರು. ಸುಳ್ಯ ತಹಶೀಲ್ದಾರ್ ಮಂಜುನಾಥ್ ಜಿ. ಉಪಸ್ಥಿತರಿದ್ದರು. ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿಭಾಗೀಯ ಸಂಯೋಜಕರು ಹಾಗೂ ಎಸ್.ಡಿ.ಎಂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಧರ್ಮೇಂದ್ರ ಕುಮಾರ್ , ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ| ನೀಲಾಂಬಿಕೈ ನಟರಾಜನ್, ಕಾಲೇಜಿನ ಕ್ರೀಡಾ ಸಂಯೋಜಕರು ಹಾಗೂ ಅನಸ್ತೇಶಿಯಾ ವಿಭಾಗದ ಪ್ರಾಧ್ಯಾಪಕ ಡಾ| ವರುನ್ ಭಾಸ್ಕರ್, ದೈಹಿಕ ಶಿಕ್ಷಣ ನಿರ್ದೇಶಕ ಮಿಥನ್, ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕ ಡಾ| ಅರ್ಜುನ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತೀಕ್ಷಾ ಕಾಮತ್ ಪ್ರಾರ್ಥಿಸಿದರು, ನಿಕ್ಷೇಪ್, ಚಂದ್ರಶೇಖರ್ ಮತ್ತು ಕುಸುಮಾಂಜಲಿ ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮದ ಬಳಿಕ ಮೈದಾನಕ್ಕೆ ತೆರಳಿ ಗಣ್ಯರು ಫುಟ್ ಬಾಲ್ ಚೆಂಡನ್ನು ಗೋಲ್ ಪೆಟ್ಟಿಗೆಯೊಳಗೆ ಸೇರಿಸುವ ಮೂಲಕ ಪಂದ್ಯಾವಳಿಗೆ ಅಧಿಕೃತ ಚಾಲನೆ ನೀಡಿದರು. ಡಾ | ಗೀತಾ ದೊಪ್ಪ, ಡಾ | ನವ್ಯಾ, ಡಾ | ದಿನೇಶ್ ಪಿ ವಿ, ಡಾ | ನಮೃತಾ ಕೆ ಜಿ, ಡಾ | ಅಪೂರ್ವ ದೊರೆ, ಡಾ | ಪ್ರೀತರಾಜ್ ಬಳ್ಲಾಲ್ ಸೇರಿದಂತೆ ಎಲ್ಲಾ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಸಿಬ್ಬಂದಿ ಉಪಸ್ಥಿತರಿದ್ದರು. 3 ದಿನಗಳ ಕಾಲ ನಡೆಯುಲಿರುವವ ಕ್ರೀಡಾಕೂಟದಲ್ಲಿ 45 ತಂಡಗಳು ಪಾಲ್ಗೊಳ್ಳಲಿವೆ. ಸೆ.5ರಂದು ಸಮಾರೋಪ ಸಮಾರಂಭ ನಡೆಯಲಿದೆ.
Click