ನ್ಯೂಸ್ ನಾಟೌಟ್: ಮುಸ್ಲಿಂ ಯುವಕನಿಗೆ ಥಳಿಸಿದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಯುವತಿ ಕುಲ್ಕುಂದ ಎಂಬಲ್ಲಿಗೆ ತಲುಪಿದಾಗ ಮುಸ್ಲಿಂ ಯುವಕ ಬ್ಯಾಗನ್ನು ದೂಡಿಕೊಂಡು ಮಾತನಾಡಲು ಯತ್ನಿಸಿದ್ದಾನೆ. ಈ ವೇಳೆ ಮೊಬೈಲ್ ನಂಬರ್ ಕೂಡ ಕೇಳಿದ್ದಾನೆ. ಆರೋಪಿಯು ವಿದ್ಯಾರ್ಥಿನಿಯ ಮೈ ಕೈಗೆ ತಬ್ಬಿ ಹಿಡಿದು ಮಾನಭಂಗಕ್ಕೆ ಯತ್ನಿಸಿದ್ದಾನೆ. ಕಿರುಕುಳ ತಾಳಲಾರದೆ ಯುವತಿ ಬೇರೆ ಸೀಟ್ ನಲ್ಲಿ ಕುಳಿತಿದ್ದು ನಂತರ ಬಸ್ ಸುಬ್ರಹ್ಮಣ್ಯ ಬಸ್ ನಿಲ್ದಾಣ ತಲುಪಿದಾಗ ಬಸ್ ನ ಚಾಲಕನಿಗೆ ದೂರು ನೀಡಿದ್ದು ಚಾಲಕರು ಆರೋಪಿಯನ್ನು ವಿಚಾರಿಸುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದೇ ವೇಳೆ ಯುವತಿಗೆ ಆತ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.