ನ್ಯೂಸ್ ನಾಟೌಟ್ : ಶಿಸ್ತು, ಏಕತೆ ಮತ್ತು ಸಮಯಪ್ರಜ್ಞೆ ಮೊದಲಾದ ಸದ್ವಿಚಾರಗಳನ್ನು ಎನ್ಸಿಸಿ ಕಲಿಸಿಕೊಡುತ್ತದೆ. ಇದರಿಂದ ವ್ಯಕ್ತಿತ್ವ ವಿಕಸನವಾಗುವುದರ ಜತೆಗೆ ವಿದ್ಯಾರ್ಥಿಗಳಿಗೆ ದೇಶ ಸೇವೆ ಮಾಡುವ ಉತ್ತಮ ಅವಕಾಶಗಳು ಲಭಿಸುತ್ತದೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಇದರ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಹೇಳಿದರು.
ಅವರು ಸುಳ್ಯದ ನೆಹರು ಮೆಮೊರಿಯಲ್ ಕಾಲೇಜಿನಲ್ಲಿ ಭಾನುವಾರ RDC-II ಮತ್ತು CATC ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ತನ್ನ ಕಾಲೇಜು ದಿನಗಳಲ್ಲಿನ ಎನ್ಸಿಸಿ ಹಳೆಯ ನೆನಪುಗಳು ಮೆಲುಕು ಹಾಕಿ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಮಾತುಗಳನ್ನಾಡಿದರು.
ಲೆಫ್ಟಿನೆಂಟ್ ಕರ್ನಲ್ ರೆಜಿತ್ ಮುಕುಂದನ್ ಮಾತನಾಡಿ, ಕಂಬೈನ್ಡ್ ಆನ್ವಲ್ ಟ್ರೈನಿಂಗ್ ಕ್ಯಾಂಪ್ ಮತ್ತು ಆರ್ ಡಿಸಿ ಡೀಪ್ ಸೆಲೆಕ್ಷನ್ ಕ್ಯಾಂಪ್ನಲ್ಲಿ ಯಾವೆಲ್ಲಾ ಕವಾಯತುಗಳಿರುತ್ತವೆ, ಮತ್ತು ಕೆಡೆಟ್ಗಳು ಹೇಗಿರಬೇಕು ಎಂಬುವುದರ ಬಗ್ಗೆ ಸಮಗ್ರವಾಗಿ ವಿವರಿಸಿದರು.
ಶಿಬಿರ ಸೆ. 22ರಿಂದ ಸೆ. 30 ರವರೆಗೆ ನಡೆಯಲಿದ್ದು, ಮಂಗಳೂರು- ಉಡುಪಿ- ಕೊಡಗು- ಶಿವಮೊಗ್ಗ ಜಿಲ್ಲೆಯ ಒಟ್ಟು 584 ಎನ್ ಸಿ ಸಿ ಕೆಡೆಟ್ ಗಳು ಪಾಲ್ಗೊಂಡಿದ್ದಾರೆ. ಈ ಶಿಬಿರದಲ್ಲಿ ವಿವಿಧ ಕವಾಯತುಗಳು ನಡೆಯಲಿವೆ. ವಿವಿಧ ಬೆಟಾಲಿಯನ್ ನ ಅಧಿಕಾರಿಗಳು, ವಿವಿಧ ಕಾಲೇಜಿನ ಅಸೋಸಿಯೇಟ್ ಎನ್ ಸಿಸಿ ಅಧಿಕಾರಿಗಳು ಎನ್ಎಂಸಿ ಕಾಲೇಜಿನ ಪ್ರಾಂಶುಪಾಲ ಪ್ರೊ. ರುದ್ರಕುಮಾರ್ ಎಂಎಂ.ಪಾಲ್ಗೊಂಡಿದ್ದರು.
ಇದು ದೆಹಲಿಯ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸುವ ಕೆಡೆಟ್ ಗಳ ಎರಡನೇ ಹಂತದ ಆಯ್ಕೆ ಶಿಬಿರ ಮತ್ತು ಕಂಬೈನ್ಡ್ ಆನ್ವಲ್ ಟ್ರೈನಿಂಗ್ ಕ್ಯಾಂಪ್ ಆಗಿದೆ. ಗಣರಾಜ್ಯೋತ್ಸವ ಪೆರೇಡಿಗೆ ಒಟ್ಟು 7 ಆಯ್ಕೆ ಶಿಬಿರಗಳು ನಡೆಯಲಿದ್ದು, ಅದರ ಎರಡನೇ ಹಂತದ ಶಿಬಿರ ಇದಾಗಿದೆ. ಈಗಾಗಲೇ ಶಿವಮೊಗ್ಗದಲ್ಲಿ ನಡೆದ ಮೊದಲ ಹಂತದ ಶಿಬಿರದಲ್ಲಿ ಆಯ್ಕೆಯಾದ 200 ಕೆಡೆಟ್ ಗಳು ಈ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಈ ಶಿಬಿರದ ಸಂಪೂರ್ಣ ನೇತೃತ್ವವನ್ನು ಲೆಫ್ಟಿನೆಂಟ್ ಕರ್ನಲ್ ರೆಜಿತ್ ಮುಕುಂದನ್ ವಹಿಸಿಕೊಂಡಿದ್ದಾರೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಕೆ ವಿ ಚಿದಾನಂದ ಮತ್ತು ಆಡಳಿತ ಮಂಡಳಿಯವರ ಮಾರ್ಗದರ್ಶನದಲ್ಲಿ ಕಾಲೇಜಿನ ಎನ್ ಸಿ ಸಿ ಅಧಿಕಾರಿ ಲೆಫ್ಟಿನೆಂಟ್ ಸೀತಾರಾಮ ಎಂ. ಡಿ ಯವರು ಶಿಬಿರದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.