ನ್ಯೂಸ್ ನಾಟೌಟ್: ರಾಜ್ಯ ರಾಜಧಾನಿಯ ಪ್ರತಿಷ್ಠಿತ ವ್ಯಾಪಾರ ಮಳಿಗೆಯೊಂದರ ವಾಶ್ ರೂಮ್ ಬಳಸಲು ಗ್ರಾಹಕರು 1000 ರೂಪಾಯಿಯ ಶಾಪಿಂಗ್ ಮಾಡಬೇಕು ಎಂದು ಹೇಳಲಾಗಿದೆ.
ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ಫೀನಿಕ್ಸ್ ಮಾರ್ಕೆಟ್ಸಿಟಿ ಮಾಲ್ನಲ್ಲಿ ವಾರಾಂತ್ಯದಲ್ಲಿ ನಡೆದಿದೆ ಎನ್ನಲಾದ ಘಟನೆಯನ್ನು ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
1,000 ರೂಪಾಯಿಯ ಶಾಪಿಂಗ್ ಬಿಲ್ ಇಲ್ಲದ ಕಾರಣ ನೆಲ-ಮಹಡಿಯ ರೆಸ್ಟ್ರೂಮ್ ಗೆ ಪ್ರವೇಶವನ್ನು ಮಾಲ್ ನಿರಾಕರಿಸಲಾಯಿತು ಎಂಬುದನ್ನು ಬರೆದುಕೊಂಡಿದ್ದಾರೆ.
“ಈ ಮಾಲ್ನಲ್ಲಿ ನೆಲ ಅಂತಸ್ತಿನ ರೆಸ್ಟ್ರೂಮ್ ಅನ್ನು ಈಗ “ವಿಐಪಿ” ರೆಸ್ಟ್ ರೂಮ್ ಎಂದು ಪರಿಗಣಿಸಲಾಗಿದೆ. ಇದನ್ನು ಮಹಿಳಾ ಭದ್ರತಾ ಅಧಿಕಾರಿಯೊಬ್ಬರು ನೋಡಿಕೊಳ್ಳುತ್ತಾರೆ. ರೆಸ್ಟ್ ರೂಮ್ ಬಳಸುವ ಮುನ್ನ ನಾನು ಶಾಪಿಂಗ್ ಬಿಲ್ ಅನ್ನು ತೋರಿಸಬೇಕೆಂದು ಅವರು ಒತ್ತಾಯಿಸಿದರು ರೆಸ್ಟ್ ರೂ ಅನ್ನು ಬಳಸಲು ಶಾಪಿಂಗ್ ಬಿಲ್ ಕನಿಷ್ಟ ₹ 1000 ಆಗಿರಬೇಕು ಎಂದು ತಿಳಿದು ನನಗೆ ಆಘಾತವಾಯಿತು” ಎಂದು ಗ್ರಾಹಕರೊಬ್ಬರು ಬರೆದುಕೊಂಡಿದ್ದಾರೆ.
Click