ನ್ಯೂಸ್ ನಾಟೌಟ್: ಶಿವಮೊಗ್ಗದ ಹೊಸ ನಗರ ಸಮೀಪದ ಜಯನಗರದ ಶಾಫಿ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಮತ್ತು ನೂರುಲ್ ಇಸ್ಲಾಂ ಮದ್ರಸ ಮತ್ತು ಎಸ್ಎಸ್ಎಫ್ ಮತ್ತು ಎಸ್ ವೈಎಸ್ ಜಯನಗರ ಶಾಖೆ ಜಂಟಿ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ 1449ರ ಜನ್ಮ ದಿನಾಚರಣೆ ಪ್ರಯುಕ್ತ 3 ದಿನಗಳ ಕಾಲದ ‘ಬೃಹತ್ ಮೀಲಾದ್ ಜಲ್ಸ’ ಕಾರ್ಯಕ್ರಮವು ಜಯನಗರ ಮುಹ್ಯುದ್ದೀನ್ ಮಸ್ಜಿದ್ ಅಂಗಳದಲ್ಲಿ ಅದ್ದೂರಿಯಾಗಿ ನಡೆಯಿತು.
27-9-2024 (ಶುಕ್ರವಾರ) ಜುಮುಅಃ ನಮಾಝ್ ನಂತರ ಮುಹ್ಯುದ್ದೀನ್ ಶಾಫಿ ಜುಮುಅಃ ಮಸ್ಜಿದ್ನ ಖತೀಬರಾದ ಶಾಹುಲ್ ಹಮೀದ್ ಸಖಾಫಿ ನೆಲ್ಯಾಡಿ, ಮುಖ್ಯೋಪಾಧ್ಯಾಯರಾದ ಉಮರುಲ್ ಫಾರೂಖ್ ಸಖಾಫಿ ವಳವೂರು, ಅಧ್ಯಕ್ಷ ಅಬ್ದುಲ್ ಖಾದರ್ ಬಾಷಾ ಜಯನಗರ, SSF& SYS ನಾಯಕರ ನೇತೃತ್ವದಲ್ಲಿ ಧ್ವಜಾರೋಹಣ ಹಾಗೂ ಐ.ಕೆ ಇಕ್ಬಾಲ್ ಮದನಿ ಕುಕ್ಕೋಟ್ಟುರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅಂದು ಮಗ್ರಿಬ್ ನಮಾಝ್ನ ಬಳಿಕ ನೂರುಲ್ ಇಸ್ಲಾಂ ಅರಬಿಕ್ ಮದ್ರಸಾ ವಿಧ್ಯಾರ್ಥಿಗಳಿಂದ ಬುರ್ದಾ ಮಜ್ಲಿಸ್, ಖವಾಲಿ, ಹಾಡು, ಭಾಷಣ ಸೇರಿದಂತೆ ಅನೇಕ ವರ್ಣಮಯ ಕಾರ್ಯಕ್ರಮಗಳು ನಡೆಯಿತು. ನೂರುಲ್ ಇಸ್ಲಾಂ ಅರಬಿಕ್ ಮದ್ರಸಾದ 6ನೇ ತರಗತಿಯಲ್ಲಿ ಕಲಿಯುತ್ತಿರುವ ಅಮೀನ್ ಬ್ನು ಶುಕೂರು, ಅಫ್ರೀದ್ ಬ್ನು ಯೂಸುಫ್ ಎಂಬೀ ಎರಡು ವಿದ್ಯಾರ್ಥಿಗಳು ರಚಿಸಿದ ‘ಜಯನಗರ ಮುಹ್ಯುದ್ದೀನ್ ಜುಮುಅಃ ಮಸ್ಜಿದ್ & ನೂರುಲ್ ಇಸ್ಲಾಂ ಮದ್ರಸ’ದ ಕ್ರಾಫ್ಟ್ ಹಾಗೂ ಶಝ್ಫಃ ಬಿಂತ್ ಜಲೀಲ್ ಚಂದವಾಗಿ ಬಿಡಿಸಿದ ‘ನಅ್ಲೇ ಮುಬಾರಕ್’ನ ಚಿತ್ರವು ಎಲ್ಲರ ಗಮನ ಸೆಳೆಯಿತು. 28-9-2024ರಂದು ಮಗ್ರಿಬ್ ನಮಾಝ್ನ ಬಳಿಕ ಅಲ್-ಹಾಜ್ ಅಸಯ್ಯಿದ್ ಅಬೂಬಕರ್ ಸಿದ್ಧೀಖ್ ತಙ್ಙಳ್ ಅಲ್-ಹಾದಿ ತೀರ್ಥಹಳ್ಳಿರವರ ನೇತೃತ್ವದಲ್ಲಿ ವಾರ್ಷಿಕ ಸ್ವಲಾತ್ ಮಜ್ಲಿಸ್ ಹಾಗೂ ಮಂಗಳೂರಿನ ಪ್ರಖ್ಯಾತ ಅಲ್-ಅಮೀನ್ ಇಖ್ವಾನ್ ತಂಡದಿಂದ ಬುರ್ದಾ ಮಜ್ಲಿಸ್, ಮಾಸ್ಟರ್ ಸಲ್ಮಾನುಲ್ ಫಾರಿಶ್ ಉಳ್ಳಾಲರವರಿಂದ ನಅ್ತೇ ಶರೀಫ್, ಎಸ್.ಎಸ್.ಎಫ್ ರಾಷ್ಟೀಯ ಮಟ್ಟದ ವೇದಿಕೆಯಲ್ಲಿ ಮಿಂಚಿದ ಕೋಗಿಲೆ ಕಂಠದ ಪ್ರತಿಭೆ ಮುಹಮ್ಮದ್ ರಾಝಿಖ್ಮಾವಿನಕಟ್ಟೆ ಗುಲ್ವಾಡಿಯಿಂದ ವಿವಿಧ ಭಾಷೆಗಳಲ್ಲಿ ಪ್ರವಾದಿ ಮದ್ಹ್ ಗಾನ ನಡೆಯಿತು.
29-9-2024ರಂದು ಬೆಳಿಗ್ಗೆ 9 ಘಂಟೆಗೆ ಜಯನಗರದ ಶಾಫಿ-ಹನಫಿ ಜಮಾಅತ್ನವರೆಲ್ಲಾ ಸೇರಿ ಜಯನಗರದ ರಾಜ ಬೀದಿಯಲ್ಲಿ ಬೃಹತ್ ಮೀಲಾದ್ ಕಾಲ್ನಡಿಗೆ ಜಾಥಾ ಮೆರವಣಿಗೆ ನಡೆಸಿದರು. ಪ್ರಸ್ತುತ ಜಾಥಾದ ಸಮಾರೋಪದಲ್ಲಿ ಸುಪ್ರಸಿದ್ಧ ವಾಗ್ಮಿ, ಎಸ್ ಎಸ್ ಎಫ್ ಶಿವಮೊಗ್ಗ ಜಿಲ್ಲಾ ನಾಯಕರೂ, ಜಯನಗರದ ಮಾಜಿ ಖತೀಬರೂ ಆದ D.A ಹಸನ್ ಸಖಾಫಿ ಬೆಜ್ಜವಳ್ಳಿಯವರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಜಗತ್ತಿಗೆ ಸಾರಿದ ಉದಾತ್ತವಾದ ಸಂದೇಶಗಳನ್ನು ಎಳೆ ಎಳೆಯಾಗಿ ವಿವರಿಸುತ್ತಾ ಸೌಹಾರ್ದ ಸಂದೇಶದ ಭಾಷಣ ನಡೆಸಿದರು.
ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಅನಿತಾ ಸಿಸ್ಟರ್, ಅನೇಕ ವರ್ಷಗಳಿಂದ ಅಂಗನವಾಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಾಗರತ್ನ ಟೀಚರ್, ಆಶಾ ಕಾರ್ಯಕರ್ತೆ ಶುಭ ಈ ಮೂವರನ್ನು ಪ್ರತ್ಯೇಕ ಗುರುತಿಸಿ ಜಯನಗರದ ಮುಖ್ಯ ಸರ್ಕಲ್ನಲ್ಲಿ ಸನ್ಮಾನಿಸಲಾಯಿತು.ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಜಯನಗರ ಮುಹ್ಯುದ್ದೀನ್ ಜುಮುಅಃ ಮಸ್ಜಿದ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಬಾಷಾ, ಪ್ರಧಾನ ಕಾರ್ಯದರ್ಶಿ ಜೆ.ಎಂ ಸಿದ್ಧೀಖ್, ಕೋಶಾಧಿಕಾರಿ ಹಂಝ, ಜೆ.ಎಂ ಝುಬೈರ್ ಹಾಜಿ, ಹೊಸನಗರ ಶಾಫಿ ಜುಮುಅಃ ಮಸ್ಜಿದ್ ಅಧ್ಯಕ್ಷ ಅಮಾನುಲ್ಲಾ, ಖತೀಬರಾದ ಯೂಸುಫ್ ಸಖಾಫಿ ಬನಾರಿ, ಸದ್ರ್ ಉಸ್ತಾದ್ ಬದ್ರುದ್ದೀನ್ ಝುಹ್ರಿ ನೊಣಬೂರು, ಉರುಮಾಲ್ ಮಾಸಿಕದ ಸಂಪಾದಕರಾದ ಐ.ಕೆ ಇಕ್ಬಾಲ್ ಮದನಿ, ಕುಕ್ಕೋಟ್ಟು, ಹಿರಿಯರಾದ ಜೆ.ಎಂ ಮುಹಮ್ಮದ್ ಜಯನಗರ, SSF ಜಯನಗರ ಶಾಖೆ ಅಧ್ಯಕ್ಷ ಶೌಕತ್ ಅಲಿ ಜಯನಗರ, ಕಾರ್ಯದರ್ಶಿ ನಾಸಿರ್ ಜಯನಗರ, ಹನಫೀ ಮಸ್ಜಿದ್ ಇಮಾಂ ಮೌಲಾನಾ ಅಬ್ದುಲ್ ಸಲಾಮ್ ಹಝ್ರತ್, ಅಬೂ ನಿಝಾಂ ಅಮಾನುಲ್ಲಾ ಜಯನಗರ, ಹನಫಿ ಮಸ್ಜಿದ್ ಅಧ್ಯಕ್ಷ ಮುಹಮ್ಮದ್ ಅಶ್ರಫ್,SYS ಅಧ್ಯಕ್ಷ ತೌಫೀಖ್ ಜಯನಗರ, ಇಂಡಿಯನ್ ಚಿಕನ್ ಸೆಂಟರ್ ಮಾಲಕ ಅಶ್ರಫ್ ಜಯನಗರ ಸೇರಿದಂತೆ ಅನೇಕ ಉಲಮಾ-ಉಮರಾಗಳು ಪಾಲ್ಗೊಂಡಿದ್ದರು.