ರಷ್ಯಾ ಸೇನೆಯಲ್ಲಿ ಸಿಲುಕಿದ್ದ ಕರ್ನಾಟಕದ 3 ಯುವಕರು ಮರಳಿ ಮನೆಗೆ, ಕೆಲಸದ ಆಮಿಷವೊಡ್ಡಿ ಹಣ ಪಡೆದು ರಷ್ಯಾಕ್ಕೆ ಕಳುಹಿಸಿದ್ದ ಏಜೆಂಟ್..!

ನ್ಯೂಸ್ ನಾಟೌಟ್: ರಷ್ಯಾದಲ್ಲಿ ಸಿಲುಕಿಕೊಂಡಿದ್ದ ಕಲಬುರಗಿಯ ಮೂವರು ಯುವಕರು ತಾಯ್ನಾಡಿಗೆ ಮರಳಿದ್ದಾರೆ. ಕಲಬುರಗಿಯ ಮೂವರು ಸೇರಿ ಒಟ್ಟು ಆರು ಜನ ಭಾರತೀಯರು ತವರಿಗೆ ವಾಪಸ್ ಆಗಿದ್ದಾರೆ. ಕಲಬುರಗಿಯ ನೂರಾನಿ ಮೊಹಲ್ಲಾ ನಿವಾಸಿ ಸೈಯದ್ ಇಲಿಯಾಸ್ ಹುಸೇನಿ, ಇಸ್ಲಾಮಬಾದ್​​ ಕಾಲೋನಿ ನಿವಾಸಿ ಮೊಹಮ್ಮದ್ ಸಮೀರ್, ಮಿಜಗುರಿ ಪ್ರದೇಶದ ಮೊಹಮ್ಮದ್ ನಯೂಮ್ ವಾಪಸ್​ ಆದ ಯುವಕರು ಎಂದು ವರದಿ ತಿಳಿಸಿದೆ. ಯುವಕರು ಮುಂಬೈ ಮೂಲದ ಏಜೆಂಟ್ ಮೂಲಕ ರಷ್ಯಾಗೆ ತೆರಳಿದ್ದರು. ಮುಂಬೈ ಮೂಲದ ಏಜೆಂಟ್​ ಈ ಯುವಕರಿಗೆ ರಷ್ಯಾದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಕಳುಹಿಸಿದ್ದರು. ಆದರೆ, ಯುವಕರನ್ನು ರಷ್ಯಾ ಸೇನೆ ಯುದ್ಧ ಭೂಮಿಯಲ್ಲಿ ಬಳಸಿಕೊಂಡಿತ್ತು. ಯುವಕರಿಗೆ ರಷ್ಯಾದ ಸೈನ್ಯದಲ್ಲಿ ಬಂಕರ್‌ ಅಗೆಯುವ ಕೆಲಸ ನೀಡಲಾಗಿತ್ತು. ಈ ಕುರಿತು ಯುವಕರು ವಿಡಿಯೋ ಮಾಡಿ ಕಷ್ಟ ಹೇಳಿಕೊಂಡಿದ್ದರು.ಬಳಿಕ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್​ ಖರ್ಗೆ ಯುವಕರನ್ನು ಮರಳಿ ತರುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದರು. ಆರೇಳು ತಿಂಗಳ ಬಳಿಕ ಯುವಕರು ತಾಯ್ನಾಡಿಗೆ ಮರಳಿದ್ದಾರೆ. Click