ವಶಪಡಿಸಿಕೊಂಡಿದ್ದ ಅಕ್ರಮ ಮದ್ಯ ನಾಶದ ವೇಳೆ ಬಾಟಲಿ ದೋಚಿದ ಜನರು..! ಮದ್ಯಪ್ರಿಯರ ಗುಂಪು ನೋಡಿ ಪೊಲೀಸರೇ ಶಾಕ್..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ವಶಪಡಿಸಿಕೊಂಡಿದ್ದ ಅಕ್ರಮ ಮದ್ಯದ ಬಾಟಲಿಗಳನ್ನು ನಾಶ ಮಾಡುತ್ತಿದ್ದ ವೇಳೆಯಲ್ಲಿ ಪೊಲೀಸರ ಎದುರೇ ಮದ್ಯಪ್ರಿಯರು ಬಾಟಲಿಗಳನ್ನು ಹೊತ್ತೊಯ್ದ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ. ರಾಜಧಾನಿ ಅಮರಾವತಿಯಿಂದ ಸುಮಾರು 40 ಕಿಲೋ ಮೀಟರ್‌ ದೂರದಲ್ಲಿರುವ ಗುಂಟೂರಿನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಏಯ್‌, ಏಯ್‌ ಎಂದು ಕೂಗಾಡುತ್ತಿರುವ ನಡುವೆಯೇ ಜನರು ಗುಂಪಿನಲ್ಲಿ ಬಂದು ಬಾಟಲಿಗಳನ್ನು ಹೊತ್ತೊಯ್ದಿದ್ದಾರೆ. ಪೊಲೀಸರ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ವಶಪಡಿಸಿಕೊಂಡಿದ್ದ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಮದ್ಯವನ್ನು ಡಂಪಿಂಗ್‌ ಯಾರ್ಡ್‌ ನಲ್ಲಿ ನಾಶಪಡಿಸುತ್ತಿದ್ದ ವೇಳೆ ಏಕಾಏಕಿ ಜನರ ಗುಂಪು ಲಗ್ಗೆ ಇಟ್ಟು ಮದ್ಯದ ಬಾಟಲಿಗಳನ್ನು ಹೊತ್ತೊಯ್ದಿರುವ ಘಟನೆಯಿಂದ ವರದಿಯಾಗಿದೆ.ಮದ್ಯದ ಬಾಟಲಿ ನಾಶದ ಸಂದರ್ಭದಲ್ಲಿ ಜನರು ಲಗ್ಗೆ ಇಟ್ಟು ಬಾಟಲಿ ಹೊತ್ತೊಯ್ಯುತ್ತಾರೆ ಎಂಬ ಊಹೆ ಪೊಲೀಸರಿಗೆ ಇರಲಿಲ್ಲ ಎನ್ನಲಾಗಿದೆ. Click