ನ್ಯೂಸ್ ನಾಟೌಟ್: ಆನ್ ಲೈನ್ ಶಾಪಿಂಗ್ ನಲ್ಲಿ ಆಗುವ ಎಡವಟ್ಟುಗಳ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿರುತ್ತವೆ. ಪುರುಷರ ಒಳಚಡ್ಡಿ ಆರ್ಡರ್ ಮಾಡಿದ ವ್ಯಕ್ತಿಯೊಬ್ಬನಿಗೆ ಬಿಕಿನಿ ಡೆಲಿವರಿ ಆದ ಘಟನೆ ನಡೆದಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದ ಪೋಸ್ಟ್ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ದೆಹಲಿಯ ಪ್ರಿಯಾಂಶ್ ಎಂಬ ವ್ಯಕ್ತಿ ಇತ್ತೀಚಿಗಷ್ಟೇ ಬ್ಲಿಂಕಿಟ್ ಆಪ್ ಮೂಲಕ ಪುರುಷರ ಒಳಉಡುಪುಗಳನ್ನು ಆರ್ಡರ್ ಮಾಡಿದ್ದಾರೆ. ಅದರಂತೆ ಬ್ಲಿಂಕಿಟ್ ವೇಗದ ಸೇವೆ ನೀಡಲು ಹೋಗಿ ಎಡವಟ್ಟು ಮಾಡಿಕೊಂಡಿದೆ. ಪ್ರಿಯಾಂಶ್ ಪುರುಷರ ಒಳಚಡ್ಡಿ ಆರ್ಡರ್ ಮಾಡಿದರೆ ಬ್ಲಿಂಕಿಟ್ ಮಹಿಳೆಯರ ಬಿಕಿನಿಯನ್ನು ಡೆಲಿವರಿ ಮಾಡಿದೆ. ಇದನ್ನು ಕಂಡು ಶಾಕ್ ಆದ ಪ್ರಿಯಾಂಶ್ ತಕ್ಷಣ ಬ್ಲಿಂಕಿಟ್ ಕಸ್ಟಮರ್ ಕೇರ್ಗೆ ಕರೆಮಾಡಿ ದೂರು ನೀಡಿದ್ದಾರೆ. ಹಣ ರೀಫಂಡ್ ಮಾಡುವಂತೆ ಕೇಳಿದರೂ ಏನೂ ಪ್ರತಿಕ್ರಿಯೆ ನೀಡದ ಕಾರಣ, ಇವರು ತಮಗಾದ ಅನುಭವವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
@priyansh_who ಎಂಬ ಟ್ವಿಟರ್ ಖಾತೆಯಲ್ಲಿ ಡೆಲಿವರಿ ಆದ ಬಿಕಿನಿಯ ಫೋಟೋ ಹಂಚಿಕೊಂಡು ತಮಗಾದ ಅನುಭವವನ್ನು ಬರೆದುಕೊಂಡಿದ್ದಾರೆ. ಸೆ.07 ರಂದು ಹಂಚಿಕೊಂಡಿರುವ ಈ ಪೋಸ್ಟ್ ಕೇವಲ ಮೂರು ದಿನದಲ್ಲಿ 3.7 ಮಿಲಿಯನ್ ಅಂದರೆ 30ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
Click