ನ್ಯೂಸ್ ನಾಟೌಟ್: ಅಯೋಧ್ಯೆಯ ರಾಮಮಂದಿರ ಪ್ರತಿಕೃತಿ, ಪ್ಯಾರಾಲಿಂಪಿಕ್ಸ್ ನೆನಪಿನ ಕಾಣಿಕೆ, ನಂದಿ ಕಲಾಕೃತಿ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿಗೆ ಬಂದಿರುವ 600ಕ್ಕೂ ಹೆಚ್ಚು ಬೆಲೆಬಾಳುವ ಉಡುಗೊರೆಗಳ ಹರಾಜು ಪ್ರಕ್ರಿಯೆ ಮಂಗಳವಾರ(ಸೆ.17) ಆರಂಭವಾಗಿದೆ.
ಅ.2ರ ವರೆಗೆ ಈ ಹರಾಜು ಪ್ರಕ್ರಿಯೆ ನಡೆಯಲಿದೆ.
ಮೋದಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಆನ್ಲೈನ್ ಹರಾಜು ನಡೆಸಲಾಗುತ್ತಿದ್ದು, 2019ರಲ್ಲಿ ಇದನ್ನು ಮೊದಲಾಗಿ ಆರಂಭಿಸಲಾಗಿತ್ತು. ಇದರಲ್ಲಿ ಸಂಗ್ರಹವಾದ ಹಣವನ್ನು ಸೈನಿಕರ ಕ್ಷೇಮಾಭಿವೃದ್ಧಿಗೆ ಬಳಕೆ ಮಾಡಲಾಗುತ್ತದೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ.
Click