ನ್ಯೂಸ್ ನಾಟೌಟ್ : ಶ್ರೀ ವಿಷ್ಣು ಸೇವಾ ಸಮಿತಿ (ರಿ) ಉದಯಗಿರಿ, ಮಾವಿನಕಟ್ಟೆ ಇದರ ಆಶ್ರಯದಲ್ಲಿ ಓಣಂ ಆಚರಣೆ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮವನ್ನು ಶ್ರೀ ವಿಷ್ಣು ಸೇವಾ ಸಮಿತಿ (ರಿ) ಉದಯಗಿರಿ, ಮಾವಿನಕಟ್ಟೆ ಇದರ ಗೌರವ ಸಲಹೆಗಾರ ಗಂಗಾಧರ ಕೇಪಳಕಜೆ ಉದ್ಘಾಟಿಸಿದರು. ಮುಖ್ಯ ಅತಿಥಿ ಬಾಲಕೃಷ್ಣ ಮರೀಲು ಓಣಂ ಹಬ್ಬದ ಮಹತ್ವವನ್ನು ತಿಳಿಸಿಕೊಟ್ಟರು. ನಾಲ್ಕೂರು ಗ್ರಾಮ ಪಂಚಾಯತ್ ಸದಸ್ಯ ವಿಜಯಕುಮಾರ್ ಚಾರ್ಮತ, ತೀಯ ಸಮಾಜದ ಚರಿತ್ರೆ, ಹಿಂದುತ್ವದ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು.
ವಿಷ್ಣು ಸೇವಾ ಸಮಿತಿ (ರಿ) ಉದಯಗಿರಿ ಮಾವಿನಕಟ್ಟೆ ಅಧ್ಯಕ್ಷ ಹರೀಶ್ಚಂದ್ರ ಕೇವಳಕಜೆ, ನಿವೃತ್ತ ಕೆ.ಎಸ್.ಆರ್.ಟಿ.ಸಿ.ಚಾಲಕ ಕುಮಾರ್ ಅಡ್ಡನಪಾರೆ, ಉದ್ಯಮಿ ಅನಿಲ್ ಗುತ್ತಿಗಾರು, ಶ್ರೀ ವಿಷ್ಣು ಸೇವಾ ಸಮಿತಿ (ರಿ) ಉದಯಗಿರಿ ಮಾವಿನಕಟ್ಟೆ ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ನಾರ್ಣಕಜೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ ಉಪಕೇಂದ್ರ ಸುಳ್ಯ ‘ಬಿ’ ಇದರ ಆರೋಗ್ಯ ಸುರಕ್ಷಾಧಿಕಾರಿ ಲೀಲಾಭಾಸ್ಕರ್ ಅಡ್ಕಾರ್ ಇವರ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು ಎಸ್.ಎಸ್ .ಎಲ್.ಸಿ ಹಾಗೂ ಪಿ.ಯು.ಸಿ ವಿಭಾಗದಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ಸಾಂಸ್ಕೃತಿಕ ವೈವಿಧ್ಯ , ಸ್ಪರ್ಧೆಗಳೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಗೌತಮಿ ಕೃಷ್ಣ ಕಾರ್ಯಕ್ರ ನಿರೂಪಿಸಿದರು.