ನ್ಯೂಸ್ ನಾಟೌಟ್: ಭಾರತದ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮನೆಗೆ ಗಣೇಶ ಪೂಜೆಗಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭೇಟಿ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಸಿಜೆಐ ಮನೆಗೆ ಪ್ರಧಾನಿ ಮೋದಿ ಭೇಟಿ ಕೆಟ್ಟ ಸಂದೇಶವನ್ನು ರವಾನಿಸುತ್ತದೆ ಎಂದು ಪ್ರತಿಪಕ್ಷ ಟೀಕಿಸಿದೆ.
ಗಣೇಶ ಪೂಜೆಗೆ ಹಾಜರಾಗುವುದು ಅಪರಾಧವಲ್ಲ. ನ್ಯಾಯಾಧೀಶರು ಮತ್ತು ರಾಜಕಾರಣಿಗಳು ಅನೇಕ ಸಂದರ್ಭಗಳಲ್ಲಿ ವೇದಿಕೆ ಹಂಚಿಕೊಳ್ಳುತ್ತಾರೆ ಎಂದು ವಿಪಕ್ಷಗಳ ಟೀಕೆಗೆ ಆಡಳಿತಾರೂಢ ಬಿಜೆಪಿ ತಿರುಗೇಟು ನೀಡಿದೆ.
ಶಿವಸೇನೆಯ ನಾಯಕ, ರಾಜ್ಯಸಭಾ ಸಂಸದ ಸಂಜಯ್ ರಾವುತ್ ಮೋದಿ ಭೇಟಿಯನ್ನು ಟೀಕಿಸಿದ್ದು, ಇಂತಹ ಭೇಟಿಗಳು ಅನುಮಾನಗಳನ್ನು ಹುಟ್ಟುಹಾಕುತ್ತವೆ. ಶಿವಸೇನೆ ಯುಬಿಟಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ನಡುವಿನ ಜಗಳಕ್ಕೆ ಸಂಬಂಧಿಸಿದ ಪ್ರಕರಣದಿಂದ ಭಾರತದ ಮುಖ್ಯ ನ್ಯಾಯಮೂರ್ತಿಗಳು ಹಿಂದೆ ಸರಿಯಬೇಕು ಎಂದು ಅವರು ಸಲಹೆ ನೀಡಿದ್ದಾರೆ.
“ನೋಡಿ, ಇದು ಗಣಪತಿ ಹಬ್ಬ. ಪ್ರಧಾನಿ ಇದುವರೆಗೆ ಎಷ್ಟು ಜನರ ಮನೆಗೆ ಭೇಟಿ ನೀಡಿದ್ದಾರೆ? ನನಗೆ ಮಾಹಿತಿ ಇಲ್ಲ. ದೆಹಲಿಯಲ್ಲಿ ಹಲವೆಡೆ ಗಣೇಶ ಹಬ್ಬ ಆಚರಿಸಲಾಗುತ್ತದೆ, ಆದರೆ ಪ್ರಧಾನಿ ಮುಖ್ಯ ನ್ಯಾಯಮೂರ್ತಿಗಳ ಮನೆಗೆ ಹೋದರು, ಮತ್ತು ಪ್ರಧಾನಮಂತ್ರಿ ಮತ್ತು ಮುಖ್ಯ ನ್ಯಾಯಾಧೀಶರು ಒಟ್ಟಾಗಿ ಆರತಿಯನ್ನು ಮಾಡಿದರು, ಸಂವಿಧಾನದ ಪಾಲಕರು ಈ ರೀತಿಯಲ್ಲಿ ರಾಜಕೀಯ ನಾಯಕರನ್ನು ಭೇಟಿ ಮಾಡಿದರೆ, ಜನರು ಅನುಮಾನಿಸುತ್ತಾರೆ, ”ಎಂದು ರಾವುತ್ ಟೀಕಿಸಿದರು.
ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು. 2009 ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಭಾಗವಹಿಸಿದ್ದರು ಎಂದಿದ್ದಾರೆ.
Click