- +91 73497 60202
- [email protected]
- November 23, 2024 2:57 PM
ನ್ಯೂಸ್ ನಾಟೌಟ್: ಜಮ್ಮುವಿನಲ್ಲಿ ನಡೆದ ಸಭೆಯಲ್ಲಿ ವೇದಿಕೆ ಮೇಲೆ ಅಸ್ವಸ್ಥಗೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಆರೋಗ್ಯ ಕುರಿತು ಪ್ರಧಾನಿ ಮೋದಿ ಕರೆ ಮಾಡಿ ವಿಚಾರಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ನಡೆಯಲಿರುವ ಮೂರನೇ ಹಂತದ ಮತದಾನಕ್ಕೆ ಭಾನುವಾರ ಪ್ರಚಾರ ಅಂತ್ಯಗೊಂಡಿತ್ತು, ಅಂದು ಸಭೆಯನ್ನುದ್ದೇಶಿಸಿ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಿರುವಾಗ ಅಸ್ವಸ್ಥಗೊಂಡಿದ್ದರು., ಬಳಿಕ ಮಾತು ಮುಂದುವರೆಸಿ ‘‘ನನಗೆ ಈಗ 83 ವರ್ಷ, ಮೋದಿಯನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸುವವರೆಗೂ ನಾನು ಸಾಯುವುದಿಲ್ಲ’’ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಕರೆ ಮಾಡಿ ಖರ್ಗೆಯವರು ಆರೋಗ್ಯ ವಿಚಾರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಗಣಿಗಾರಿಕೆ ಮತ್ತು ಮದ್ಯದ ಒಪ್ಪಂದಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಹೊರಗಿನವರಿಗೆ ಪ್ರಾಬಲ್ಯ ಸಾಧಿಸಲು ಬಿಜೆಪಿ ಅವಕಾಶ ನೀಡುತ್ತಿದೆ ಎಂದು ಖರ್ಗೆ ಆರೋಪಿಸಿದರು. ಕೆಲಕಾಲ ಅವರನ್ನು ವೇದಿಕೆಯ ಮೇಲೆ ಕೂರಿಸಲಾಯಿತು. ಸ್ವಲ್ಪ ಹೊತ್ತು ಕುಳಿತ ನಂತರ ಮತ್ತೊಮ್ಮೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಅವರು ನಂತರ ವೇದಿಕೆ ಮೇಲೆ ನಿಂತು ಭಾಷಣ ಆರಂಭಿಸಿ ಜಮ್ಮು-ಕಾಶ್ಮೀರ ರಾಜ್ಯ ಸ್ಥಾನಮಾನ ಮರುಸ್ಥಾಪಿಸಲು ಹೋರಾಟ ನಡೆಸುತ್ತೇವೆ ಎಂದರು. ಜಮ್ಮು ಮತ್ತು ಕಾಶ್ಮೀರದ ಯುವಕರ ಭವಿಷ್ಯಕ್ಕಾಗಿ ಮೋದಿಯವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ, ವಾಸ್ತವವೆಂದರೆ ಕಳೆದ 10 ವರ್ಷಗಳಲ್ಲಿ ಇಡೀ ದೇಶದ ಯುವಕರನ್ನು ಕತ್ತಲೆಗೆ ತಳ್ಳಲಾಗಿದೆ, ಇದಕ್ಕೆ ಸ್ವತಃ ಮೋದಿಯವರೇ ಕಾರಣ ಎಂದು ಖರ್ಗೆ ಆರೋಪಿಸಿದ್ದಾರೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ