ನ್ಯೂಸ್ ನಾಟೌಟ್ : ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶ್ವಾಸಕೋಶ ದಿನಾಚರಣೆ (ಸೆ. 26 ) ಅಂಗವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.) ಇದರ ಅಧ್ಯಕ್ಷ ಡಾ | ಕೆ.ವಿ. ಚಿದಾನಂದ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಇದರ ಉಪಾಧ್ಯಕ್ಷೆ ಶೋಭಾ ಚಿದಾನಂದ, ಕಾಲೇಜಿನ ಡೀನ್ ಡಾ| ನೀಲಾಂಬಿಕೆ ನಟರಾಜನ್ ಉಪಸ್ಥಿತರಿದ್ದರು. ಈ ಸಂದರ್ಭ ಶ್ವಾಸಕೋಶ ಪುನಃಶ್ಚೇತನ ಕೇಂದ್ರ ಹಾಗೂ ತಂಬಾಕು ವ್ಯಸನ ಮುಕ್ತ ಕೇಂದ್ರವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.)ಇದರ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಉದ್ಘಾಟಿಸಿದರು.
ಬಳಿಕ ಶ್ವಾಸಕೋಶ ಔಷಧ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಪ್ರೀತಿರಾಜ್ ಬಳ್ಳಾಲ್ ಶ್ವಾಸಕೋಶ ದಿನಾಚರಣೆಯ ಅಂಗವಾಗಿ ವಿಶೇಷ ಮಾಹಿತಿ ಹಂಚಿಕೊಂಡರು. ಹಾಗೂ ಶ್ವಾಸಕೋಶ ಔಷಧ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಅನಿರುದ್ಧ ಶ್ವಾಸಕೋಶ ಪುನಶ್ಚೇತನ ಕೇಂದ್ರದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ಬಳಿಕ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥ ಡಾ| ಪೂನಂ ತಂಬಾಕು ವ್ಯಸನ ಮುಕ್ತ ಕೇಂದ್ರದ ಬಗ್ಗೆ ಮಾಹಿತಿ ನೀಡಿದರು. ಡಾ| ಶಮಾ ಪ್ರಾರ್ಥಿಸಿ, ಡಾ| ಸುಶ್ಮಿತಾ ಸ್ವಾಗತಿಸಿದರು ಹಾಗೂ ಡಾಕ್ಟರ್ ಪ್ರೀತಿರಾಜ್ ಬಳ್ಳಾಲ್ ವಂದಿಸಿದರು. ಈ ಸಂದರ್ಭ ಎಲ್ಲಾ ವಿಭಾಗದ ಮುಖ್ಯಸ್ಥರು, ವಿದ್ಯಾರ್ಥಿಗಳು,ಪ್ರಾಧ್ಯಾಪಕರು ಬೋಧಕೇತರವೃಂದದವರು ಉಪಸ್ಥಿತರಿದ್ದರು.