ನ್ಯೂಸ್ ನಾಟೌಟ್: ಪ್ರೇಮ ವೈಫಲ್ಯದ ಹಿನ್ನೆಲೆ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದ ರೈಲ್ವೆ ನಿಲ್ದಾಣ ಬಳಿಯ ಶ್ರೀನಿವಾಸ್ ಲಾಡ್ಜ್ ನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಸಿಗೆಹಡ್ಲು ಕಾಮನಕೆರೆ ನಿವಾಸಿ ಚಿನ್ಮಯ್ ಎಸ್.ಜಿ, ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ. ಇತ ಸೆ.04 ರಂದು ಶ್ರೀನಿವಾಸ್ ಲಾಡ್ಜ್ ನ ರೂಮ್ ನಂ. 212 ರಲ್ಲಿ ತಂಗಿದ್ದ. ಸೆ. 6 ರಂದು ಸಂಜೆ ರೂಮ್ ಕ್ಲೀನ್ ಮಾಡಲು ಲಾಡ್ಜ್ ಸಿಬ್ಬಂದಿ ಹೋಗಿದ್ದ ವೇಳೆ ರೂಮ್ ಒಳಗಿನಿಂದ ಲಾಕ್ ಆಗಿತ್ತು.
ಈ ಹಿನ್ನಲೆ ಮಾರನೇ ದಿನ(ಸೆ. 7) ರಾತ್ರಿ ಲಾಡ್ಜ್ ಸಿಬ್ಬಂದಿ ಮತ್ತೆ ರೂಮ್ ಬಾಗಿಲು ತಟ್ಟಿದ್ದಾನೆ. ಆದರೂ ಚಿನ್ಮಯ್ ಬಾಗಿಲು ತೆರೆಯದ ಹಿನ್ನಲೆ ಅನುಮಾನಗೊಂಡು ಮತ್ತೊಂದು ಬೀಗ ಬಳಸಿ ಲಾಕ್ ಓಪನ್ ಮಾಡಿದ್ದಾರೆ. ಬಾಗಿಲು ತೆಗೆದಾಗ ಯುವಕ ಚಿನ್ಮಯ್ ಶವವಾಗಿ ಬಿದ್ದಿದ್ದ. ಕೂಡಲೇ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತನ ಬಳಿ ಇದ್ದ ಪತ್ರ ಮತ್ತು ಪೊಲೀಸರ ತನಿಖೆಯಿಂದ ಇದು ಪ್ರೇಮ ವೈಫಲ್ಯದ ಕಾರಣ ಘಟನೆ ನಡೆದಿದೆ ಎನ್ನಲಾಗಿದೆ.