Railway Job|ಕೊಂಕಣ ರೈಲ್ವೆಯಲ್ಲಿ 190 ಹುದ್ದೆಗಳಿಗೆ ಅರ್ಜಿ ಆಹ್ವಾನ, ಕರ್ನಾಟಕದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ

ನ್ಯೂಸ್ ನಾಟೌಟ್: ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯಲ್ಲಿ 190 ಖಾಲಿ ಹುದ್ದೆಗಳಿದ್ದು, ನೇಮಕಾತಿಗಾಗಿ ಆದೇಶ ಹೊರಡಿಸಲಾಗಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಭಾಗದ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು ಎಂದು ವರದಿ ತಿಳಿಸಿದೆ. ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸೆಪ್ಟೆಂಬರ್ 16 ಮತ್ತು ಅಕ್ಟೋಬರ್ 6 ರ ನಡುವೆ ಅಧಿಕೃತ ವೆಬ್‌ಸೈಟ್ ಮೂಲಕ ಸಲ್ಲಿಸಲು ತಿಳಿಸಲಾಗಿದೆ. ಒಟ್ಟು 190 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. KRCL ಯೋಜನೆಗಾಗಿ ಭೂಮಿಯನ್ನು ನೀಡಿರುವ ಕುಟುಂಬಗಳ ಅಭ್ಯರ್ಥಿಗಳಿಗೆ ಆದ್ಯತೆಯಿದೆ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.ವಿದ್ಯುತ್ ವಿಭಾಗದಲ್ಲಿ ಹಿರಿಯ ವಿಭಾಗದ ಇಂಜಿನಿಯರ್ ಗಳಾಗಿ ದುಡಿಯಲು 5 ಖಾಲಿ ಹುದ್ದೆಗಳು, ತಂತ್ರಜ್ಞ ವಿಭಾಗದಲ್ಲಿ15 ಖಾಲಿ ಹುದ್ದೆಗಳು, ಸಹಾಯಕ ಲೋಕೋ ಪೈಲಟ್ ವಿಭಾಗದಲ್ಲಿ15 ಖಾಲಿ ಹುದ್ದೆಗಳು, ಹಿರಿಯ ವಿಭಾಗದ ಇಂಜಿನಿಯರ್ ಆಗಿ 5 ಖಾಲಿ ಹುದ್ದೆಗಳು, ಟ್ರ್ಯಾಕ್ ಮೇಂಟೇನರ್ ವಿಭಾಗದಲ್ಲಿ 35 ಖಾಲಿ ಹುದ್ದೆಗಳು, ಯಾಂತ್ರಿಕ ವಿಭಾಗ ತಂತ್ರಜ್ಞ ವಿಭಾಗದಲ್ಲಿ 20 ಖಾಲಿ ಹುದ್ದೆಗಳು ಖಾಲಿ ಇರುವುದಾಗಿದೆ ಪ್ರಕಟಣೆ ತಿಳಿಸಿದೆ. ಆಪರೇಟಿಂಗ್ ವಿಭಾಗದ ಸ್ಟೇಷನ್ ಮಾಸ್ಟರ್ ಆಗಿ10 ಹುದ್ದೆಗಳು, ಗೂಡ್ಸ್ ಟ್ರೈನ್ ಮ್ಯಾನೇಜರ್ ಆಗಿ 5 ಖಾಲಿ ಹುದ್ದೆಗಳು, ಪಾಯಿಂಟ್ಸ್ ಮ್ಯಾನ್ ಆಗಿ 60 ಖಾಲಿ ಹುದ್ದೆಗಳು, ಸಿಗ್ನಲ್ ಮತ್ತು ದೂರಸಂಪರ್ಕ ಇಲಾಖೆ ESTM-III ಯಲ್ಲಿ 15 ಖಾಲಿ ಹುದ್ದೆಗಳು, ವಾಣಿಜ್ಯ ಮೇಲ್ವಿಚಾರಕರಾಗಿ 5 ಖಾಲಿ ಹುದ್ದೆಗಳು ಇವೆ.ಈ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಅಭ್ಯರ್ಥಿಗಳು (ಪ್ರಥಮ ಆದ್ಯತೆ): KRCL ಯೋಜನೆಗಾಗಿ ಭೂಮಿಯನ್ನು ನೀಡಿರುವ ಕುಟುಂಬಗಳ ವ್ಯಕ್ತಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎನ್ನಲಾಗಿದೆ. ಎಷ್ಟು ಪ್ರಮಾಣದ ಭೂಮಿಯನ್ನು KRCL ಯೋಜನೆಗಾಗಿ ನೀಡಲಾಗಿದೆ ಎಂಬುದನ್ನು ಪರಿಗಣಿಸದೆ ಅರ್ಜಿ ಸಲ್ಲಿಸಬಹುದು. ಈ ಭೂಮಿ ಕಳೆದುಕೊಂಡ ಕುಟುಂಬದವರ ಸಂಗಾತಿ, ಮಕ್ಕಳು ಮತ್ತು ಮೊಮ್ಮಕ್ಕಳು ಸಹ ಅರ್ಹರಾಗಿದ್ದು, ನೇಮಕಾತಿ ಪ್ರಕ್ರಿಯೆಯಲ್ಲಿ ಮೊದಲ ಆದ್ಯತೆಯನ್ನು ಪಡೆಯುತ್ತಾರೆ ಎಂದಿದೆ. KRCL ಯೋಜನೆಗಾಗಿ ಭೂಮಿ ಕಳೆದುಕೊಳ್ಳದ ಅಭ್ಯರ್ಥಿಗಳು (ಎರಡನೇ ಆದ್ಯತೆ): ಕರ್ನಾಟಕ, ಮಹಾರಾಷ್ಟ್ರ ಅಥವಾ ಗೋವಾದಲ್ಲಿ ನೆಲೆಸಿರುವ ಅಭ್ಯರ್ಥಿಗಳು ಮಾನ್ಯ ಉದ್ಯೋಗ ವಿನಿಮಯ ಕಾರ್ಡ್‌ಗಳೊಂದಿಗೆ ಕೊಂಕಣ ರೈಲ್ವೆ ಮಾರ್ಗದಲ್ಲಿ ನೋಂದಾಯಿಸಿಕೊಂಡಿರಬೇಕು ಎಂದು ತಿಳಿಸಿದೆ. ಅರ್ಜಿದಾರರು ಆಗಸ್ಟ್ 1, 2024 ರಂತೆ 18 ರಿಂದ 36 ವರ್ಷ ವಯಸ್ಸಿನವರಾಗಿರಬೇಕು ಎಂದು ತಿಳಿಸಿದೆ. ಹೆಚ್ಚಿನ ಮಾಹಿತಿ ಕೊಂಕಣ ರೈಲ್ವೆ ಇಲಾಖೆಯ ಅಧಿಕೃತ ವೆಬ್ ಸೈಟ್ ಮೂಲಕ ಮಾಹಿತಿ ತಿಳಿದುಕೊಳ್ಳಬಹುದು. Click