ಕೊಳ್ಳೇಗಾಲ: ನಿಲ್ಲಿಸಿದ್ದ ಕಾರಿನಲ್ಲಿ ನಿಗೂಢವಾಗಿ ಮೃತದೇಹ ಪತ್ತೆ..! ಕಾರಿನೊಳಗಿಂದ ರಕ್ತ ಸುರಿಯುವುದು ಕಂಡ ಸ್ಥಳೀಯರು..!

ನ್ಯೂಸ್ ನಾಟೌಟ್ : ಕೊಳ್ಳೇಗಾಲದ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಸ್ ನಿಲ್ದಾಣದ ಬದಿಯಲ್ಲಿ ನಿಲ್ಲಿಸಿದ್ದ ಕಾರೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಗಂಡಸಿನ ಮೃತದೇಹವೊಂದು ನಿಗೂಢ ರೀತಿಯಲ್ಲಿ ಪತ್ತೆಯಾಗಿದೆ. ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಸುಮಾರು 40ರಿಂದ 45 ವರ್ಷದ ವಯಸ್ಸಿನ ವ್ಯಕ್ತಿಯ ಮೃತದೇಹ ಕಾರಿನ ಹಿಂಬದಿ ಸೀಟ್ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಸೆ. 20ರಂದು ಪತ್ತೆಯಾಗಿದೆ ಮತ್ತು ತಡವಾಗಿ ಬೆಳಕಿಗೆ ಬಂದಿದೆ. ಮೃತದೇಹವು ಕೊಳೆತು ದುರ್ವಾಸನೆ ಬರುತ್ತಿತ್ತು. ಶುಕ್ರವಾರ ಮಧ್ಯಾಹ್ನದಿಂದ ನಿಂತಿರುವ ಕಾರಿನ ಡೋರ್ ನಿಂದ ರಕ್ತ ಕೆಳಗಡೆ ಸುರಿದು ವಾಸನೆ ಬರುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಕೊಳ್ಳೇಗಾಲ ಪೊಲೀಸ್ ಇನ್ ಸ್ಪೆಕ್ಟರ್ ಶಿವ ಮಾದಯ್ಯ, ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ ಸ್ಪೆಕ್ಟರ್ ಸುಪ್ರೀತ್, ಅಪರಾಧ ವಿಭಾಗದ ಸಬ್ ಇನ್ ಸ್ಪೆಕ್ಟರ್ ಚೆಲುವರಾಜು ಹಾಗೂ ಸಿಬ್ಬಂದಿ ಸ್ಥಳಕ್ಕಾಗಿಮಿಸಿ ಪರಿಶೀಲಿಸುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. Click