ಕೊಲೆ ಕೇಸ್ ​ನಲ್ಲಿ ದರ್ಶನ್​ ವಿರುದ್ಧ ಚಾರ್ಜ್​ಶೀಟ್ ನಲ್ಲಿರುವ ಆರೋಪಗಳೇನು..? 3,991 ಪುಟಗಳ ಚಾರ್ಜ್ ಶೀಟ್ ನಲ್ಲಿ 231ಕ್ಕೂ ಹೆಚ್ಚು ಸಾಕ್ಷಿದಾರರ ಹೇಳಿಕೆಗಳ ಉಲ್ಲೇಖ

ನ್ಯೂಸ್ ನಾಟೌಟ್: ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ 3,991 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. ಇದರಲ್ಲಿ ರೇಣುಕಾಸ್ವಾಮಿ ಕೊಲೆಯ ಬಗ್ಗೆ ಇಂಚಿಂಚೂ ಮಾಹಿತಿ ಇದೆ. ದೋಷಾರೋಪನ ಪಟ್ಟಿಯಲ್ಲಿ ಇರುವ ಮಾಹಿತಿಗಳು ದರ್ಶನ್ ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದನ್ನು ದೃಢ ಪಡಿಸಿವೆ. ದರ್ಶನ್ ಎ2 ಆರೋಪಿ ಆಗಿ ಮುಂದುವರಿದಿದ್ದಾರೆ. ಕಿಡ್ನಾಪ್ ಮಾಡಿಸಿದ್ದು, ಹಲ್ಲೆ ಮಾಡಿದ್ದು, ಕೊಲೆ ನಡೆದ ಬಳಿಕ ಅದನ್ನು ಮುಚ್ಚಿಹಾಕಲು ಹಣ ನೀಡಿದ್ದು ದರ್ಶನ್ ಅನ್ನೋದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಆಗಿದೆ. ದರ್ಶನ್ ಕೊಲೆ ನಡೆದ ಸ್ಥಳದಲ್ಲಿ ಇರುವುದು ಹಾಗೂ ಕೊಲೆ ಬಳಿಕ ಸ್ಥಳದಿಂದ ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ದರ್ಶನ್ ಬಟ್ಟೆ ಮತ್ತು ಶೂನಲ್ಲಿ ರೇಣುಕಾಸ್ವಾಮಿ ರಕ್ತ ಇರುವುದು ಪತ್ತೆ ಆಗಿದೆ. ಇದಕ್ಕೆ ಸಾಕ್ಷ್ಯಗಳು ಕೂಡ ಸಿಕ್ಕಿವೆ. ದರ್ಶನ್ ಹಲ್ಲೆ ಮಾಡಿರುವ ಬಗ್ಗೆ ಮತ್ತು ಕೊಲೆಯಲ್ಲಿ ಭಾಗಿಯಾದ್ದು ಚಾರ್ಜ್​ಶೀಟ್​ನಲ್ಲಿ ದೃಢಪಟ್ಟಿದೆ. ಚಾರ್ಜ್ ಶೀಟ್ ನಲ್ಲಿ 231ಕ್ಕೂ ಹೆಚ್ಚು ಸಾಕ್ಷಿದಾರರ ಹೇಳಿಕೆಗಳ ಉಲ್ಲೇಖ ಮಾಡಲಾಗಿದೆ. ಪವಿತ್ರಾ ಗೌಡ ಕೊಲೆ ಮಾಡಲು ಮೂಲ ಕಾರಣ ಅನ್ನೋದು ಚಾರ್ಜ್​​ಶೀಟ್​ನಲ್ಲಿ ಉಲ್ಲೇಖ ಆಗಿದೆ. ಹಲ್ಲೆ ನಡೆಸುವ ಸ್ಥಳದಲ್ಲಿ ಹಾಜರಿದ್ದರು ಮತ್ತು ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿರೋದು ಅಧಿಕೃತ ಆಗಿದೆ. ಸಿಸಿಟಿವಿಯಲ್ಲಿ ಪವಿತ್ರಾ ಗೌಡ ಕೂಡ ಕಾಣಿಸಿಕೊಂಡಿದ್ದಾರೆ. ಪವಿತ್ರಾ ಗೌಡ ಮೊಬೈಲ್ ಕೃತ್ಯದ ಸ್ಥಳದಲ್ಲಿ ಆ್ಯಕ್ಟೀವ್ ಆಗಿತ್ತು. ಉಳಿದಂತೆ ಕೊಲೆಯಲ್ಲಿ ಇಬ್ಬರ ನೇರ ಪಾತ್ರದ ಬಗ್ಗೆ ಹಲವು ಗೌಪ್ಯ ಸಾಕ್ಷಿಗಳು ದೊರಕಿವೆ ಎನ್ನಲಾಗಿದೆ. Click