ಮಗಳ ತಲೆ ಮೇಲೆ ಸಿಸಿಟಿವಿ ಅಳವಡಿಸಿದ ತಂದೆ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್‌ ನಾಟೌಟ್‌: ಹೆಣ್ಣು ಮಗಳ ರಕ್ಷಣೆಗಾಗಿ ಇಲ್ಲೊಬ್ಬ ತಂದೆ ಆಕೆಯ ತಲೆ ಮೇಲೆ ಸಿಸಿಟಿವಿ ಅಳವಡಿಸಿದ ವಿಚಿತ್ರ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಈ ಸಂಬಂಧ ವಿಡಿಯೋವೊಂದು ವೈರಲ್ ಆಗುತ್ತಿದೆ. ತಂದೆ ತನ್ನ ಮಗಳ ರಕ್ಷಣೆಗಾಗಿ ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಯಾಕೆ ಈ ರೀತಿ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಯುವತಿ, “ನನ್ನ ತಂದೆ ಇದನ್ನು ಆಳವಡಿಸಿದ್ದಾರೆ. ಇದರಿಂದ ಅವರಿಗೆ ನಾನು ಎಲ್ಲಿಗೆ ಹೋಗುತ್ತಿದ್ದೇನೆ. ಏನು ಮಾಡುತ್ತಿದ್ದೇನೆ ಎನ್ನುವುದು ಎಲ್ಲವೂ ಗೊತ್ತಾಗುತ್ತದೆ. ಈ ರೀತಿ ಅವರು ಮಾಡುವುದನ್ನು ನಾನು ವಿರೋಧಿಸಿಲ್ಲ” ಎಂದು ಹೇಳಿದ್ದಾಳೆ. “ಕರಾಚಿಯಲ್ಲಿ ಅಪ್ಪ – ಮಗಳನ್ನು ಒಬ್ಬ ಶ್ರೀಮಂತ ಕಾರಿನಿಂದ ಢಿಕ್ಕಿ ಹೊಡೆದು ಪರಾರಿ ಆಗಿದ್ದರು, ಅವರ ಬಳಿ ಸಾಕ್ಷ್ಯಗಳಿದ್ದರೆ ಅವರನ್ನು ಹಿಡಿಯಬಹುದಿತ್ತು. ಇದರಿಂದಾಗಿ ನನ್ನ ಪೋಷಕರು ಇದನ್ನು ಹಾಕಿದ್ದಾರೆ” ಎಂದು ಯುವತಿ ಹೇಳಿದ್ದಾಳೆ.ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೇ “ಇದು ಕೇವಲ ಪಾಕಿಸ್ತಾನದಲ್ಲಿ ಮಾತ್ರ ಸಾಧ್ಯವೆಂದು” ಹಲವರು ಅಭಿಪ್ರಾಯ ಪಟ್ಟಿದ್ದಾರೆ. Click