ನ್ಯೂಸ್ ನಾಟೌಟ್ : ಸುಳ್ಯದ ಕೆವಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 2024ನೇ ಸಾಲಿನ ವಿಶ್ವ ಹೃದಯ ದಿನಾಚರಣೆ(ಸೆ.29 ) ಅಂಗವಾಗಿ ಸೆ.30ರವರೆಗೆ ವಿಶೇಷ ಹೃದಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ.
ಶಿಬಿರದಲ್ಲಿ ನೋಂದಣಿ ಮತ್ತು ವೈದ್ಯರ ಸಮಾಲೋಚನೆ ಉಚಿತವಾಗಿರುತ್ತದೆ. ಇ. ಸಿ.ಜಿ, ಆರ್. ಬಿ. ಎಸ್, ಸೀರಮ್ ಕ್ರಿಯೇಟಿನೈನ್, ಹಿಮೋಗ್ಲೋಬಿನ್ , ಲಿಪಿಡ್ ಪ್ರೊಫೈಲ್, ಎಕೋಕಾರ್ಡಿಯೋಗ್ರಾಮ್ ಈ ಎಲ್ಲಾ ಪರೀಕ್ಷಾ ಸೌಲಭ್ಯಗಳು ಶಿಬಿರದಲ್ಲಿ ಲಭ್ಯವಿರುತ್ತದೆ. ಈ ಎಲ್ಲಾ ವೈದ್ಯಕೀಯ ಪರೀಕ್ಷೆಗಳಿಗೆ 1600 ರೂಪಾಯಿ ಶುಲ್ಕವಿದ್ದು, ಆದರೆ ಶಿಬಿರದ ಪ್ರಯುಕ್ತ ಕೇವಲ 800 ರೂಪಾಯಿಗೆ ರಿಯಾಯಿತಿ ದರ ನಿಗದಿಪಡಿಸಲಾಗಿದೆ. ಈ ಶಿಬಿರದಲ್ಲಿ ಭಾಗವಹಿಸಿದವರಿಗೆ ಹೆಚ್ಚುವರಿ ಕ್ಯಾಥ್ ಲ್ಯಾಬ್ ಚಿಕಿತ್ಸಾ ವಿಧಾನಗಳು ಅಗತ್ಯವಿದ್ದಲ್ಲಿ ಶೇ. 20 ರಿಯಾಯಿತಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 7353752223, 7892571409, 8147061895