ನ್ಯೂಸ್ ನಾಟೌಟ್: ಹೆಡ್ ಕಾನ್ಸ್ಟೇಬಲ್ನಿಂದಲೇ ಮೊಬೈಲ್ ನಂಬರ್ಗಳ ಸಿಡಿಆರ್, ಟವರ್ ಲೋಕೇಶನ್ ಗೌಪ್ಯ ಮಾಹಿತಿ ಸೋರಿಕೆ ಆದ ಘಟನೆ ಕೊಪ್ಪಳದಲ್ಲಿ ನಡೆದದೆ.
ಹಾಗಾಗಿ ಮಾಹಿತಿ ಬಹಿರಂಗಪಡಿಸಿದ ನಗರದ ಸಿಇಎನ್ ಠಾಣೆ ಹೆಡ್ ಕಾನ್ಸ್ಟೇಬಲ್ ಕೊಟೇಪ್ಪ ವಿರುದ್ಧ ಸಿಇಎನ್ ಠಾಣೆಯ ಎಎಸ್ಐ ಕೇಸ್ ದಾಖಲಿಸಿದ್ದಾರೆ. ಆದರೆ 20 ದಿನಗಳಿಂದ ಕೊಟೇಪ್ಪ ನಾಪತ್ತೆಯಾಗಿದ್ದಾರೆ.
ಯಾವುದೇ ಮಾಹಿತಿ ನೀಡಲು ಮೇಲಧಿಕಾರಿಗಳ ಅನುಮತಿ ಕಡ್ಡಾಯ ಮತ್ತು ಗೌಪ್ಯ ಮಾಹಿತಿಯನ್ನು ಎಲ್ಲೂ ಹಂಚಿಕೊಳ್ಳುವಂತಿಲ್ಲ. ಆದರೆ ಯಾರಾದರೂ ಹಣ ಕೊಟ್ಟರೇ ಸಿಡಿಆರ್, ಟವರ್ ಲೋಕೇಶನ್ ಮಾಹಿತಿ ಮಾಹಿತಿ ನೀಡುತ್ತಿದ್ದರು ಹೆಚ್ಸಿ ಕೊಟೇಪ್ಪ ಎಂದು ತಿಳಿದು ಬಂದಿದೆ. 145 ಮೊಬೈಲ್ ಸಿಡಿಆರ್, 9 ಟವರ್ ಡಂಪ್ ಮಾಹಿತಿ ಸೋರಿಕೆ ಆಗಿದೆ.
ಇತ್ತ ಎಫ್ಐಆರ್ ದಾಖಲಾಗುತ್ತಿದ್ದಂತೆ ಹೆಡ್ ಕಾನ್ಸ್ಟೇಬಲ್ ಪರಾರಿಯಾಗಿದ್ದು, ಕೊಟೇಪ್ಪನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
Click