ನ್ಯೂಸ್ ನಾಟೌಟ್: ಪ್ರವಾಹ ಮತ್ತು ಭೂಕುಸಿತ ತಡೆಯಲು ವಿಫಲರಾಗಿ ‘ಕರ್ತವ್ಯ ಲೋಪ’ ಎಸಗಿದ್ದಕ್ಕಾಗಿ ಸುಮಾರು 30 ಅಧಿಕಾರಿಗಳಿಗೆ ಮರಣದಂಡನೆ ವಿಧಿಸಲು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆದೇಶಿಸಿದ್ದಾರೆ ಎಂದು ದಕ್ಷಿಣ ಕೊರಿಯಾದ ವಿವಿಧ ಮಾಧ್ಯಮಗಳು ವರದಿ ಮಾಡಿವೆ.
ಇತ್ತೀಚಿನ ಪ್ರವಾಹದಿಂದ ಉಂಟಾದ ಜೀವ ಹಾನಿಗಳ ‘ಒಪ್ಪಿಕೊಳ್ಳಲಾಗದ ನಷ್ಟ’ಕ್ಕೆ ಹೊಣೆಗಾರರಾದವರ ಮೇಲೆ ಕಠಿಣ ಶಿಕ್ಷೆ ವಿಧಿಸಲು ಕಿಮ್ ಜಾಂಗ್ ಉನ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪ ಆರೋಪಗಳನ್ನು ಹೊರಿಸಲಾಗಿದ್ದು, ಕಳೆದ ತಿಂಗಳೇ ಮರಣದಂಡನೆ ಜಾರಿಯಾಗಿದೆ ಎಂದು ಹೇಳಲಾಗಿದೆ.
ಉತ್ತರ ಕೊರಿಯಾದ ಹಲವೆಡೆ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ ಅಂದಾಜು ಸಾವಿರ ಮಂದಿ ಜೀವ ಕಳೆದುಕೊಂಡಿದ್ದಾರೆ.
“ಪ್ರವಾಹಪೀಡಿತ ಪ್ರದೇಶದಲ್ಲಿನ 20- 30 ಅಧಿಕಾರಿಗಳನ್ನು ಕಳೆದ ತಿಂಗಳು ಏಕಕಾಲದಲ್ಲಿ ಮರಣದಂಡನೆಗೆ ಗುರಿಪಡಿಸಲಾಗಿದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮರಣದಂಡನೆಗೆ ಗುರಿಯಾದ ಅಧಿಕಾರಿಗಳ ಗುರುತು ಬಹಿರಂಗವಾಗಿಲ್ಲ. ಆದರೆ, 2019ರಿಂದ ಚಗಾಂಗ್ ಪ್ರಾಂತೀಯ ಪಕ್ಷ ಸಮಿತಿಯ ಕಾರ್ಯದರ್ಶಿಯಾಗಿದ್ದ ಕಾಂಗ್ ಬೊಂಗ್ ಹೂನ್ ಸೇರಿದಂತೆ ಹಲವರು ನಾಯಕರನ್ನು ಕಿಮ್ ಜಾಂಗ್ ಉನ್ ಅವರು ಆ ಹುದ್ದೆಗಳಿಂದ ಕಿತ್ತುಹಾಕಿದ್ದಾರೆ ಎಂದು ಉತ್ತರ ಕೊರಿಯಾದ ಸೆಂಟ್ರಲ್ ನ್ಯೂಸ್ ಏಜೆನ್ಸಿ (ಕೆಸಿಎನ್ಎ) ವರದಿ ತಿಳಿಸಿದೆ.
Click