- +91 73497 60202
- [email protected]
- November 22, 2024 12:29 AM
ನ್ಯೂಸ್ ನಾಟೌಟ್: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಮೀನುಗಾರಿಕೆಗೆ ತೆರಳಿದ್ದ ಮಲ್ಪೆ ಬೋಟ್ ಗೆ ಭಾರೀ ಅಲೆಗಳ ಕಾರಣದಿಂದ ಸಮುದ್ರಭಾಗದಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಭಾರೀ ಗಾಳಿ ಮತ್ತು ಅಲೆಗಳ ಕಾರಣದಿಂದ ಮಲ್ಪೆ ಮೂಲದ ಬೋಟ್ ನ ಫ್ಯಾನ್‌ಗೆ ಮೀನಿನ ಬಲೆ ಸಿಲುಕಿತ್ತು. ಬಲೆ ಸಿಲುಕಿಕೊಂಡ ಕಾರಣ ಮುಂದೆ ಸಾಗಲಾಗದೇ ಮುಳುಗುವ ಸ್ಥಿತಿಯಲ್ಲಿದ್ದ ಬೋಟನ್ನು ಕೂಡಲೇ ಮೀನುಗಾರರನ್ನು ರಕ್ಷಿಸಿ ಭಟ್ಕಳ ಮೂಲದ ಬೋಟ್‌ಗೆ ಹಗ್ಗ ಕಟ್ಟಿ ಎಳೆದು ತರಲಾಯಿತು ಎಂದು ವರದಿ ತಿಳಿಸಿದೆ.ತೀರ ಪ್ರದೇಶಕ್ಕೆ ಎಳೆದು ತರುವ ಮುನ್ನವೇ ಹಗ್ಗ ತುಂಡಾಗಿ ಭಟ್ಕಳದ ಹೆಬಳೆ ಪಂಚಾಯತ್ ನ ತೆಂಗಿನಗುಂಡಿ ವ್ಯಾಪ್ತಿಯ ಸಮುದ್ರ ತೀರದ ಕಲ್ಲಿನ ರಾಶಿಯಲ್ಲಿ ಸದ್ಯ ಬೋಟ್ ಸಿಲುಕಿಕೊಂಡಿದೆ. ಅಲೆಗಳ ಅಬ್ಬರ ಹೆಚ್ಚಾಗ್ಗಿರುವುದರಿಂದ ಬೋಟ್ ಅನ್ನು ಹೊರತರಲಾರದೇ ಹಾಗೆಯೇ ಬಿಡಲಾಗಿದೆ ಎನ್ನಲಾಗಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ