‘ಫೈಸ್ಟ್‌ ನೈಟ್‌’ ನಲ್ಲಿ ಮಂಚದ ಮೇಲೆ ನಾಚುತ್ತಾ ಕುಳಿತಿದ್ದ ವಧುವಿನ ಬಳಿ ಆಧಾರ್ ಕಾರ್ಡ್ ಕೇಳಿದ್ದೇಕೆ ಆತ..! ವರನ ದೂರಿನನ್ವಯ 7 ಜನರ ವಿರುದ್ಧ ಎಫ್.ಐ.ಆರ್..!

ನ್ಯೂಸ್ ನಾಟೌಟ್: ಫಸ್ಟ್ ನೈಟ್ ವೇಳೆ ವರ ಮುಖ ಮುಚ್ಚಿಕೊಂಡು ಕುಳಿತಿದ್ದ ವಧುವಿನ ಗುರುತಿಗಾಗಿ ಆಧಾರಕಾರ್ಡ್ ಕೇಳಿದ್ದಾನೆ. ವಧುವಿನ ವಿಚಾರದಲ್ಲಿ ಮೋಸ ಹೋಗಿರುವುದು ಆಗ ವರನಿಗೆ ತಿಳಿದ ವಿಚಿತ್ರ ಘಟನೆ ಛತ್ತೀಸಗಢದ ದುರ್ಗ ಎಂಬಲ್ಲಿ ನಡೆದಿದೆ. ವರ ನೀಡಿದ ದೂರಿನನ್ವಯ ವಧು ಸೇರಿದಂತೆ ಏಳು ಜನರ ವಿರುದ್ದ ಎಫ್‌ಐಆರ್ ದಾಖಲಾಗಿದೆ. ದುರ್ಗದ ಉದ್ಯಮಿ ತಮ್ಮ ಮಗನಿಗೆ ಮದುವೆ ಮಾಡಲು ಹೆಣ್ಣು ಹುಡುಕುತ್ತಿದ್ದರು. ಮಗನಿಗೆ ವಯಸ್ಸು ಹೆಚ್ಚಾಗಿರುವ ಕಾರಣ ಹೆಣ್ಣು ಸಿಗುತ್ತಿರಲಿಲ್ಲ. ಹಾಗಾಗಿ ಹಲವು ವರ್ಷಗಳಿಂದ ಜೈನ ಸಮುದಾಯದ ಹುಡುಗಿಯನ್ನು ಹುಡಕಲಾಗುತ್ತಿತ್ತು. ಈ ಸಮಯದಲ್ಲಿ ಸಂಬಂಧಿಕರೊಬ್ಬರು ಉದ್ಯಮಿಗೆ ಮದುವೆ ಬ್ರೋಕರ್ ಮೊಬೈಲ್ ನಂಬರ್ ನೀಡುತ್ತಾರೆ. ಬ್ರೋಕರ್‌ಗೆ ಕರೆ ಮಾಡಿದ ಉದ್ಯಮಿ ಎಲ್ಲಾ ವಿಷಯವನ್ನು ಹೇಳುತ್ತಾರೆ. ಕೆಲವೇ ದಿನಗಳಲ್ಲಿ ಕರೆ ಮಾಡಿದ ಬ್ರೋಕರ್ ನಿಮ್ಮ ಮಗನಿಗೆ ಹೆಣ್ಣು ಸಿಕ್ಕಿದೆ, ಬಂದು ನೋಡಿಕೊಂಡು ಹೋಗುವಂತೆ ಹೇಳಿದ್ದಾನೆ. ಮಗನಿಗೆ 43 ವರ್ಷವಾಗಿರುವ ಕಾರಣ ಮದುವೆಯ ಎಲ್ಲಾ ಖರ್ಚುಗಳನ್ನು ನಾವೇ ನೋಡಿಕೊಳ್ಳುತ್ತೇವೆ ಎಂದು ಉದ್ಯಮಿ ಹೇಳಿದ್ದಾರೆ. ವಧುವಿನ ಪೋಷಕರು 17.5 ಲಕ್ಷ ರೂಪಾಯಿ ನೀಡುವಂತೆ ಡಿಮ್ಯಾಂಡ್ ಮಾಡಿದ್ದರು. ಉದ್ಯಮಿ ವಧುವಿನ ಪೋಷಕರಿಗೆ ಹಣ ನೀಡುವುದಾಗಿಯೂ ಒಪ್ಪಿಕೊಂಡಿದ್ದರು. ಮದುವೆಗೂ ಮುನ್ನವೇ ಹಣ ನೀಡಿದ್ದರು. ಇಂದೋರ್ ಮೂಲದ ಏಜೆಂಟ್ ಸರಳಾ ತೋರಿಸಿದ ಪೂರ್ವ ಭಾರತಿ ಎಂಬಾಕೆಯ ಜೊತೆ ಉದ್ಯಮಿ ಮಗನ ಮದುವೆ ಅದ್ದೂರಿಯಾಗಿ ನಡೆದಿತ್ತು. ವಧುವಿನ ಪೋಷಕರಿಗೆ 17.5 ಲಕ್ಷ ಮತ್ತು ಏಜೆಂಟ್‌ ಸರಳಾಗೆ 1.5 ಲಕ್ಷ ರೂಪಾಯಿ ಕಮಿಷನ್ ನೀಡಿದ್ದರು. ನಂತರ ವಧು ಇಂದೋರ್‌ನಿಂದ ದುರ್ಗಕ್ಕೂ ಬಂದಿದ್ದಳು. ಕೊನೆಗೂ ಮಗನ ಮದುವೆ ಜೈನ ಸಮುದಾಯದ ಯುವತಿ ಜೊತೆ ನಡೆಯಿತು ಎಂದು ಉದ್ಯಮಿ ಸಹ ಸಂತೋಷವಾಗಿದ್ದರು. ದುರ್ಗದಲ್ಲಿ ನೂತನ ದಂಪತಿಗಾಗಿ ಫಸ್ಟ್ ನೈಟ್‌ ಸಹ ಅರೇಂಜ್ ಮಾಡಲಾಗಿತ್ತು. ಇಡೀ ರೂಮ್ ಹೂಗಳಿಂದ ಅಲಂಕರಿಸಲಾಗಿತ್ತು. ಆದ್ರೆ ವರನಿಗೆ ಯುವತಿ ಬಗ್ಗೆ ಸಣ್ಣ ಅನುಮಾನವಿತ್ತು. ಮಂಚದ ಮೇಲೆ ಮುಖ ಮುಚ್ಚಿಕೊಂಡು ಕುಳಿತಿದ್ದ ವಧು ಬಳಿ ಬಂದ ವರ ಆಧಾರ್ ಕಾರ್ಡ್ ಕೇಳಿದ್ದಾನೆ. ವಧು ಆಧಾರ್ ಕಾರ್ಡ್ ನೀಡಲು ಒಪ್ಪದಿದ್ದಾಗ, ವರ ಆಕೆಯ ಬ್ಯಾಗ್ ಪರಿಶೀಲನೆ ಮಾಡಿದ್ದಾನೆ. ಆಧಾರ್ ಕಾರ್ಡ್ ಸಿಕ್ಕಾಗ ವಧುವಿನ ಹೆಸರು ಬೇರೆಯಾಗಿತ್ತು. ಜೋರುಧ್ವನಿಯಲ್ಲಿ ವಿಚಾರಿಸಿದಾಗ, ನಾನು ಜೈನ ಸಮುದಾಯದವಳಲ್ಲ ಎಂದು ಸತ್ಯ ಬಿಚ್ಚಿಟ್ಟಿದ್ದಾಳೆ. ವಿಷಯ ತಿಳಿಯುತ್ತಲೇ ಕೋಣೆಯಿಂದ ಹೊರ ಬಂದ ವರ ತಂದೆಗೆ ಎಲ್ಲಾ ವಿಷಯ ತಿಳಿಸಿ ನಾವು ಮೋಸ ಹೋಗಿರೋದನ್ನು ಹೇಳಿದ್ದಾನೆ. ಈ ಸಂಬಂಧ ದುರ್ಗದ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ. Click