ನ್ಯೂಸ್ ನಾಟೌಟ್: ಬಿಳಿಗಿರಿ ರಂಗನಾಥ ದೇವಾಲಯ ಹುಲಿ (ಬಿ.ಆರ್.ಟಿ) ಸಂರಕ್ಷಿತ ಪ್ರದೇಶದಲ್ಲಿ ಕೇವಲ ಮೂರ್ನಾಲ್ಕು ದಿನಗಳ ಅಂತರದಲ್ಲಿ ಮೂರು ಆನೆಗಳ ಕಳೇಬರ ಪತ್ತೆಯಾಗಿರುವುದು ಆತಂಕಕ್ಕೆ ಸೃಷ್ಟಿಸಿದೆ. ಅರಣ್ಯದೊಳಗೆ ಸಮರ್ಪಕ ಗಸ್ತು ನಡೆಯುತ್ತಿಲ್ಲವೇ? ವನ್ಯಜೀವಿಗಳ ಬೇಟೆ ಕಾಡುಗಳ್ಳತನ ನಡೆಯುತ್ತಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ.
ಜಿಲ್ಲೆಯ ಬಿ.ಆರ್.ಟಿ ಹುಲಿಸಂರಕ್ಷಿತ ಪ್ರದೇಶ ಜೀವವೈವಿಧ್ಯತೆಗಳ ತಾಣ. ಹುಲಿ, ಆನೆ, ಕರಡಿ, ಕಾಡೆಮ್ಮೆ, ಚಿರತೆ ಜಿಂಕೆ ಮೊದಲಾದ ವನ್ಯಜೀವಿಗಳ ಆವಾಸಸ್ಥಾನವೂ ಆಗಿರುವ ಈ ಅರಣ್ಯದಲ್ಲಿ ಇತ್ತೀಚೆಗೆ ನಡೆದ ಆನೆಗಣತಿ ಪ್ರಕಾರ 619 ಆನೆಗಳಿವೆ. ಈ ದಟ್ಟಾರಣ್ಯದಲ್ಲಿ ಕೇವಲ ಮೂರ್ನಾಲ್ಕು ದಿನಗಳ ಅಂತರದಲ್ಲಿ ಮೂರು ಆನೆಗಳ ಕಳೇಬರಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಯಳಂದೂರು ವಲಯದಲ್ಲಿ ಒಂದು ಆನೆಯ ಕಳೇಬರಹ ಪತ್ತೆಯಾಗಿದ್ದು ಈ ಪೈಕಿ ಬೈಲೂರು ವಲಯದಲ್ಲಿ ಒಂದು ಆನೆ ಸತ್ತು ಏಳೆಂಟು ತಿಂಗಳೇ ಆಗಿದೆ. ಮತ್ತೊಂದು ಆನೆ ಸತ್ತು ಇಪ್ಪತ್ತು ದಿನಗಳ ಮೇಲಾಗಿದೆ. ಹಾಗಯೇ ಯಳಂದೂರು ವಲಯದಲ್ಲಿ ಪತ್ತೆಯಾಗಿರುವ ಆನೆ ಮೃತಪಟ್ಟು ಹಲವು ಒಂದುವಾರ ಕಳೆದಿದೆ. ಎರಡು ಆನೆಗಳ ದಂತ ಹಾಗೂ ಅಸ್ತಿಪಂಜರಗಳು ಕಂಡುಬಂದಿವೆ. ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಇಲ್ಲಿ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಈ ಆನೆಗಳು ಮೇಲ್ನೋಟಕ್ಕೆ ಸ್ವಾಭಾವಿಕವಾಗಿ ಮೃತಪಟ್ಟಿವೆ ಎಂದು ಹೇಳಲಾಗುತ್ತಿದ್ದರು ಮರಣೋತ್ತರ ಪರೀಕ್ಷಾ ವರದಿ ಬಂದ ನಂತರವಷ್ಟೇ ನಿಖರ ಕಾರಣ ಗೊತ್ತಾಗಲಿದೆ. ಬೈಲೂರು ವಲಯದ ಆರ್.ಓ.ಎಫ್ ಹಾಗೂ ಸಿಬ್ಬಂದಿಗಳಿಗೆ ನೋಟಿಸ್ ಜಾರಿ ಮಾಡಿದ್ದು ಗಸ್ತಿನ ಕುರಿತು 20 ದಿನಗಳ ಒಳಗಡೆ ಸೂಕ್ತ ವರದಿ ನೀಡುವಂತೆ ಸೂಚಿಸಿದ್ದಾರೆ.
Click