- +91 73497 60202
- [email protected]
- November 22, 2024 5:03 AM
ನ್ಯೂಸ್ ನಾಟೌಟ್: ವೈದ್ಯರುಗಳ ಕೈಬರಹದ ಪ್ರಿಸ್ಕ್ರಿಪ್ಷನ್ ಬರೆಯುವ ಬಗ್ಗೆ ಹಲವು ಆರೋಪಗಳಿವೆ. ಆರೋಗ್ಯ ಇಲಾಖೆ ರೋಗಿಗಳಿಗೆ ಮತ್ತು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಬರೆಯಲು ಸೂಚಿಸಿತ್ತು. ಆದರೆ ಇನ್ನೂ ಕೆಲವರದ್ದೂ ಊಹಿಸಲೂ ಆಗದೇ, ಅರ್ಥವೂ ಆಗದೇ ಇರುವಂತಹ ಸ್ಥಿತಿ ನಿರ್ಮಾಣವಾಗುತ್ತದೆ.ವೈದ್ಯರೊಬ್ಬರು ಬರೆದ ಪ್ರಿಸ್ಕ್ರಿಪ್ಷನ್ ಅನ್ನು ಯಾವ ಮೆಡಿಕಲ್ ಅವರೂ ಓದಲಾಗದೇ ರೋಗಿಗೆ ಕೊನೆಗೂ ಔಷಧಿ ಸಿಗದೇ ಪರದಾಡಿ, ಅಧಿಕಾರಿಗಳೇ ವೈದ್ಯರಿಗೆ ನೋಟಿಸ್ ಜಾರಿ ಮಾಡಿದ ಘಟನೆ ನಡೆದಿದೆ. ಮಧ್ಯಪ್ರದೇಶದ ವೈದ್ಯರು ಪ್ರಿಸ್ಕ್ರಿಪ್ಷನ್ ಬರೆದಿದ್ದಾರೆಂದು ಹೇಳಲಾಗಿದೆ. ಈ ಪ್ರಿಸ್ಕ್ರಿಪ್ಷನ್ ನೋಡಿದರೆ ಅತ್ಯಂತ ವಕ್ರ, ಅಡ್ಡಾದಿಡ್ಡಿ ಗೆರೆ ಮಾತ್ರ ಕಾಣುತ್ತದೆ. ಅಲ್ಲಿ ಯಾವುದೇ ಇಂಗ್ಲಿಷ್ ಪದಗಳಾಗಲಿ ಗುರುತು ಹಿಡಿಯಲು ಆಗುತ್ತಿಲ್ಲ. ಮಾಮೂಲಿ ಜನರು ಬಿಡಿ, ಸ್ವತಃ ಮೆಡಿಕಲ್ ಸಿಬ್ಬಂದಿಗೂ ಅರ್ಥವಾಗಿಲ್ಲ. 46 ವರ್ಷದ ಅರವಿಂದ್ ಕುಮಾರ್ ಸೇನ್ ಅವರು ಬಾಡಿ ಪೇನ್ ಹಾಗೂ ಜ್ವರದಿಂದ ಬಳಲುತ್ತಿದ್ದ ಕಾರಣ ಆಸ್ಪತ್ರೆಗೆ ಭೇಟಿ ನೀಡಿದ್ದರು. ಒಪಿಡಿಯಲ್ಲಿ, ಅವರು ಡಾಕ್ಟರ್ ಅಮಿತ್ ಸೋನಿ ಅವರನ್ನು ಭೇಟಿಯಾದರು, ಡಾಕ್ಟರ್ ಅಮಿತ್ ಸೋನಿ ಅವರಿಗೆ ಔಷಧಿಗಳನ್ನು ಶಿಫಾರಸು ಮಾಡಿದರು. ರೋಗಿಯು ಈ ಪ್ರಿಸ್ಕ್ರಿಪ್ಷನ್ ಅನ್ನು ವಿವಿಧ ಮೆಡಿಕಲ್‌ಗಳಿಗೆ ತೆಗೆದುಕೊಂಡು ಹೋದರು. ಯಾರಿಗೂ ಔಷಧಿಗಳ ಹೆಸರುಗಳನ್ನು ಯಾರೂ ಓದಲು ಸಾಧ್ಯವಾಗಲಿಲ್ಲ. ಇದೀಗ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್‌ಒ) ವೈದ್ಯರಿಗೆ ನೋಟಿಸ್ ಜಾರಿ ಮಾಡಿದ್ದಾರೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ