ನ್ಯೂಸ್ ನಾಟೌಟ್: ಮಹಿಳೆ ಬೈದ ವಿಚಾರಕ್ಕೆ ಮನನೊಂದು 19 ವರ್ಷದ ಫುಡ್ ಡೆಲಿವರಿ ಬಾಯ್ ಮಂಗಳವಾರ(ಸೆ.17) ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕೊಳತ್ತೂರಿನಲ್ಲಿ ನಡೆದಿದೆ.
ಈತ ತಡವಾಗಿ ಡೆಲಿವರಿ ಮಾಡಿದಕ್ಕೆ ಮಹಿಳೆಯೊಬ್ಬಳು ಬಾಯಿಗೆ ಬಂದಂತೆ ಬೈದಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.
ಪೊಲೀಸರ ಪ್ರಕಾರ ಮೃತನನ್ನು ಜೆ ಪವಿತ್ರನ್ ಎಂದು ಗುರುತಿಸಲಾಗಿದ್ದು, ಈತ ಬಿಕಾಂ ವಿದ್ಯಾರ್ಥಿಯಾಗಿದ್ದು, ಸಂಜೆಯ ಹೊತ್ತಿನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ದಿನಸಿ ಸಾಮಾನುಗಳನ್ನು ತಲುಪಿಸಲು ಹೋದಾಗ ಮಹಿಳೆಯೊಬ್ಬರು ತನ್ನನ್ನು ನಿಂದಿಸಿದ್ದರಿಂದ ಮನನೊಂದ ಆತ ಈ ನಿರ್ಧಾರ ಮಾಡಿರುವುದಾಗಿ ಯುವಕ ಡೆತ್ ನೋಟ್ನಲ್ಲಿ ಬರೆದುಕೊಂಡಿದ್ದಾನೆ ಎನ್ನಲಾಗಿದೆ.
ಮನೆಯ ಅಡ್ರಸ್ ಸಿಗದೇ ಇದ್ದ ಕಾರಣ ದಿನಸಿ ತಲುಪಿಸುವಷ್ಟರಲ್ಲಿ ತಡವಾಯಿತು. ಇದರಿಂದ ಕೋಪಗೊಂಡ ಮಹಿಳೆ ಡೆಲಿವರಿ ಕಂಪನಿಗೆ ದೂರು ನೀಡಿ, ಈ ಯುವಕನನ್ನು ಮತ್ತೆ ಡೆಲಿವರಿಗಾಗಿ ಕಳುಹಿಸಬೇಡಿ ಎಂದು ಹೇಳಿದ್ದಾಳೆ. ಕಂಪನಿಯ ಕಡೆಯಿಂದ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನಮಗೆ ತಿಳಿದಿಲ್ಲ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎರಡು ದಿನಗಳ ನಂತರ, ಶುಕ್ರವಾರ, ಕೆಲಸ ಕಳೆದುಕೊಂಡ ಯುವಕ ಮಹಿಳೆಯ ಮನೆಗೆ ಕಲ್ಲು ಎಸೆದು ಕಿಟಕಿಯ ಗಾಜನ್ನು ಒಡೆದಿದ್ದಾನೆ. ಈ ಹಿನ್ನೆಲೆಯಲ್ಲಿ ಮಹಿಳೆ ಕೊರಟ್ಟೂರು ಪೊಲೀಸರಿಗೆ ದೂರು ನೀಡಿದ್ದಳು. ಇದಲ್ಲದೇ ಯುವಕನ ಪೋಷಕರಿಗೆ ಕರೆ ಮಾಡಿ ಎಚ್ಚರಿಕೆ ನೀಡಿ ಬಿಡಲಾಗಿತ್ತು. ಇದರಿಂದ ಮನನೊಂದ ಯುವಕ ಮಂಗಳವಾರ ತನ್ನ ಮನೆಯಲ್ಲಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
Click