ನ್ಯೂಸ್ ನಾಟೌಟ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಕನ್ನಡ ಚಿತ್ರ ನಟ ದರ್ಶನ್ ಆರೋಪ ಪಟ್ಟಿ ಸೋರಿಕೆಯಾಗಿರುವ ಕುರಿತಾಗಿ ವಿರೋಧ ಪಕ್ಷಗಳು ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿವೆ. ಆದರೆ ಇದಕ್ಕೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಉತ್ತರಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ(ಸೆ.10) ಮಾತನಾಡಿದ ಅವರು, ಚಾರ್ಜ್ ಶೀಟ್ ಸಲ್ಲಿಕೆ ಆದ ಬಳಿಕ ಅದರ ಒಂದು ಪ್ರತಿಯನ್ನು ವಕೀಲರಿಗೆ ಕೊಡಲಾಗುತ್ತದೆ. ಬಳಿಕ ಅದು ಸಾರ್ವಜನಿಕವಾಗಿ ಲಭ್ಯವಾಗುತ್ತದೆ. ಸಹಜವಾಗಿ ಈ ಪ್ರಕರಣ ರಾಜ್ಯದ ಗಮನ ಸೆಳೆದಿರುವುದು. ಹೀಗಾಗಿ ಮಾಧ್ಯಮಗಳಲ್ಲಿ ಆದ್ಯತೆಯ ಮೇರೆಗೆ ಅದನ್ನು ತೋರಿಸಲಾಗುತ್ತದೆ. ಹಾಗಂತ ಟಿಆರ್ ಪಿಗೆ ಅಂತ ಹೇಳೋಕೆ ಆಗುತ್ತಾ ಎಂದು ಪ್ರಶ್ನಿಸಿದರು.
ನ್ಯಾಯಾಲಯದಲ್ಲಿ ಸಿನಿಮಾ ಸ್ಟಾರ್ ದರ್ಶನ್ ರವರಿಂದಾದ ಕೊಲೆ ಪ್ರಕರಣದ ಬಗ್ಗೆ ವಾದ ವಿವಾದಗಳು ನಡೆಯುತ್ತಿರುವಾಗ, ದರ್ಶನ್ ಪೊಲೀಸ್ ಠಾಣೆಯಲ್ಲಿ ಹೀಗೆ ಕುಳಿತಿದ್ದ, ಹಾಗೆ ಮಾಡಿದ್ದ ಎಂಬುದಾಗಿ ಸರ್ಕಾರ ಅವರ ಫೋಟೋ ಬಿಡುಗಡೆ ಮಾಡುತ್ತಿರುವುದು ಏಕೆ? ಎಂದು ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಪ್ರಶ್ನಿಸಿದ್ದರು.
ತನಿಖಾ ವರದಿ ನ್ಯಾಯಾಲಯದಲ್ಲಿ ವಿಚಾರಣೆಗೆ ನೀಡುವ ಬದಲು ಮಾದ್ಯಮಗಳಿಗೆ ಬಿಡುಗಡೆ ಮಾಡಲು ಕಾರಣವೇನು? ಇದು ಕಾನೂನು ಬಾಹಿರವಾಗಿ ಕಾಣುತ್ತಿಲ್ಲವೇ? ಇದರಿಂದ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯನವರ ಮೂಡ ಕೇಸ್ ನ್ಯಾಯಾಲಯದಲ್ಲಿ ನಡೆಯುತ್ತಿರುವುದನ್ನು ಮಾಧ್ಯಮಗಳು ಬಿತ್ತರಿಸದಿರಲಿ ಎಂಬ ತಂತ್ರವೆ? ಎಂದು ಆರೋಪಿಸಿದ್ದರು.
Click