ದರ್ಶನ್‌ ಪಾರ್ಟಿ ಮಾಡಿದ್ದ ಪಬ್‌ ನ ಸ್ಥಳ ಮಹಜರು ನಡೆಸಿದ್ದ ಫೋಟೋ ರಿವೀಲ್..! ಯಾರ್ಯಾರಿದ್ರು ಆ ಪಾರ್ಟಿಯಲ್ಲಿ..?

ನ್ಯೂಸ್ ನಾಟೌಟ್: ರೇಣುಕಾಸ್ವಾಮಿ ಕೊಲೆಗೂ ಮುನ್ನ ಪಾರ್ಟಿ ಮಾಡಿದ್ದ ಸ್ಟೋನಿ ಬ್ರೂಕ್‌ ಪಬ್‌ನಲ್ಲಿ ಆರೋಪಿ ದರ್ಶನ್‌ ಮತ್ತು ಗ್ಯಾಂಗ್‌ ಕರೆತಂದು ಪೊಲೀಸರು ಸ್ಥಳ ಮಹಜರು ಮಾಡಿಸಿರುವ ಫೋಟೋ ಈಗ ರಿವೀಲ್ ಆಗಿದೆ. ಒದರಲ್ಲಿ ಆರೋಪಿಗಳಲ್ಲದ ಕೆಲವರು ಭಾಗಿಯಾಗಿರುವುದು ಕಂಡು ಬಂದಿದೆ. ಹತ್ಯೆಗೂ ಮುನ್ನ ರೇಣುಕಾಸ್ವಾಮಿ ತನ್ನನ್ನು ಬಿಟ್ಟುಬಿಡುವಂತೆ ಕೇಳಿಕೊಳ್ಳುತ್ತಿರುವ ಫೋಟೊ ರಿವೀಲ್‌ ಆಗಿತ್ತು. ಅದರ ಬೆನ್ನಲ್ಲೇ ಸ್ಥಳ ಮಹಜರು ಫೋಟೊ ಕೂಡ ಹೊರಬಂದಿದೆ. ಆರ್‌ಆರ್‌ ನಗರದ ಸ್ಟೋನಿ ಬ್ರೂಕ್‌ ಪಬ್‌ನಲ್ಲಿ ದರ್ಶನ್‌ ಪಾರ್ಟಿ ಮಾಡಿದ್ದರು. ಅವರನ್ನು ಕರೆತಂದು ಸ್ಥಳ ಮಹಜರು ಮಾಡಿಸಲಾಗಿತ್ತು. ದರ್ಶನ್‌ ಗಾಗಿಯೇ ‘ಡಿ ಬಾಸ್ ಸಫಾರಿ’ ಅಂತಾ ಪಬ್‌ ಮಾಲೀಕ ವಿನಯ್‌ ಪ್ರತ್ಯೇಕ ವ್ಯವಸ್ಥೆ ಮಾಡಿದ್ದ. ದರ್ಶನ್ ಪಾರ್ಟಿ ಮಾಡುವ ವೇಳೆ ಎಲ್ಲಿ ಕುಳಿತಿದ್ದರು. ಪ್ರದೋಶ್ ಎಲ್ಲಿ ಕೂತಿದ್ದ. ನಟ ಚಿಕ್ಕಣ್ಣ ಕುಳಿತಿದ್ದ ಸ್ಥಳ ಯಾವುದು. ಹೀಗೆ ಪಾರ್ಟಿ ನಡೆಸಿದ್ದ ಸ್ಪಾಟ್‌ಗಳಲ್ಲಿ ಆರೋಪಿಗಳನ್ನು ಕೂರಿಸಿ ಸ್ಥಳ ಮಹಜರು ಮಾಡಲಾಗಿತ್ತು. ದರ್ಶನ್ ಎಡಬದಿಯಲ್ಲಿ ಪ್ರದೋಶ್ ಕುಳಿತಿದ್ದ, ದರ್ಶನ್ ಬಲಭಾಗದಲ್ಲಿ ನಟ ಚಿಕ್ಕಣ್ಣ ಕುಳಿತಿದ್ದದ್ದು ಫೋಟೋದಲ್ಲಿ ಕಾಣಿಸಿದೆ. Click