ನ್ಯೂಸ್ ನಾಟೌಟ್ : ನಾವು ಯಾರ ವಿರುದ್ಧವೂ ಅಲ್ಲ. ಪ್ರಜಾಪ್ರಭುತ್ವ ಮೌಲ್ಯಗಳ ಆಧಾರದ ಮೇಲೆ ಕ್ವಾಡ್ ದೇಶಗಳು ಒಟ್ಟಾಗಿ ಕೆಲಸ ಮಾಡುವುದು ಇಡೀ ಮಾನವೀಯತೆಗೆ ಬಹಳ ಮುಖ್ಯವಾಗಿದೆ ಎಂದು ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹಾಟ್ ಮೈಕ್ ನಲ್ಲಿ ಜೋ ಬೈಡನ್ ಗೆ ಉತ್ತರಿಸಿದ್ದಾರೆ.
ಅಮೆರಿಕದ ಡೆಲವೇರ್ ನಲ್ಲಿ ನಡೆದ ಕ್ವಾಡ್ ಶೃಂಗಸಭೆಯಲ್ಲಿ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು. ಮೂರು ದಿನಗಳ ಅಮೆರಿಕ ಪ್ರವಾಸದ ಮೊದಲ ಹಂತದಲ್ಲಿ ಪ್ರಧಾನಿ ಮೋದಿ ಶನಿವಾರ ಬೆಳಗ್ಗೆ ಅಮೆರಿಕದ ಫಿಲಡೆಲ್ಫಿಯಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಇದೇ ವೇಳೆ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್, ‘ಚೀನಾ ‘ಕ್ವಾಡ್’ ಸದಸ್ಯ ರಾಷ್ಟ್ರಗಳನ್ನು ಪರೀಕ್ಷಿಸುತ್ತಿದೆ. ಕ್ಸಿ ಜಿನ್ಪಿಂಗ್ (ಚೀನಾ ಅಧ್ಯಕ್ಷ) ದೇಶೀಯ ಆರ್ಥಿಕ ಸವಾಲುಗಳು ಹಾಗೂ ಪ್ರಕ್ಷುಬ್ಧತೆಯನ್ನು ನಿಯಂತ್ರಿಸುವುದರ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ ಎಂದು ಭಾವಿಸಿದ್ದೇವೆ.
ಚೀನಾ ಅಧ್ಯಕ್ಷರು ರಾಜತಾಂತ್ರಿಕ ಅವಕಾಶಗಳನ್ನೇ ಖರೀದಿಸಲು ನೋಡುತ್ತಿದ್ದಾರೆ. ದೇಶದ ಹಿತದೃಷ್ಟಿಯಿಂದ ಅವರು ಆಕ್ರಮಣಕಾರಿಯಾಗಿ ಸಾಗುತ್ತಿದ್ದಾರೆ ಎಂದು ನನಗನಿಸುತ್ತಿದೆ ಎಂದರು.
ಅಂತೆಯೇ ಆಕ್ರಮಣಕಾರಿಯಾಗಿ ನಡೆದುಕೊಳ್ಳುವುದು ಇಂಡೋ–ಪೆಸಿಫಿಕ್ ಭಾಗದ ನಮ್ಮನ್ನೆಲ್ಲ ಆರ್ಥಿಕತೆ, ತಂತ್ರಜ್ಞಾನ ಸೇರಿದಂತೆ ವಿವಿಧ ರೀತಿಯಲ್ಲಿ ಪರೀಕ್ಷಿಸುತ್ತಿದೆ. ಅದೇ ವೇಳೆ, ತೀವ್ರ ಸ್ಪರ್ಧೆಗೆ ತೀವ್ರ ರಾಜತಾಂತ್ರಿಕತೆ ಅಗತ್ಯವಾಗುತ್ತದೆ ಎಂಬುದನ್ನು ನಂಬಿದ್ದೇವೆ ಎಂದು ಬೈಡನ್ ಹೇಳಿದರು.
Click