ನ್ಯೂಸ್ ನಾಟೌಟ್: ನಿರುದ್ಯೋಗದ ಪಿಡುಗು ಕಾಡುತ್ತಿರುವುದಕ್ಕೆ ಇಲ್ಲೊಂದು ಉತ್ತಮ ಉದಾಹರಣೆಯಂತಿದೆ ಈ ಘಟನೆ. ಹರಿಯಾಣ ಸರ್ಕಾರದಲ್ಲಿ ವಿವಿಧ ಇಲಾಖೆಗಳು, ಮಂಡಳಿಗಳು, ನಿಗಮಗಳು ಮತ್ತು ನಾಗರಿಕ ಸಂಸ್ಥೆಗಳಲ್ಲಿ ಕಚೇರಿಗಳನ್ನು ಸ್ವಚ್ಛಗೊಳಿಸಲು ಸ್ವೀಪರ್ ಕೆಲಸಗಳು ಅಂದರೆ ಕಸ ಗುಡಿಸುವ ಗ್ರೂಪ್ ಡಿ ಹುದ್ದೆಗಳು ಖಾಲಿಯಿವೆ ಎಂದು ಅರ್ಜಿ ಕರೆಯಲಾಗಿತ್ತು. ಅದಕ್ಕೆ ಮಾಸಿಕ ಸಂಬಳ 15,000 ರೂಪಾಯಿ ಕೊಡುವುದಾಗಿ ಸರ್ಕಾರ ತಿಳಿಸಿತ್ತು.
ಈ ಪ್ರಕಟಣೆ ನೋಡಿ ಲಕ್ಷಾಂತರ ಅರ್ಜಿಗಳು ಬಂದಿವೆ. ವಿಶೇಷವೆಂದರೆ ಸಾವಿರಾರು ಸಂಖ್ಯೆಯ ಸ್ನಾತಕೋತ್ತರ ಪದವೀಧರರು, ಪದವೀಧರರು ಮತ್ತು ಹುದ್ದೆಗೆ ಅರ್ಹವಾದ ಶಿಕ್ಷಣ ಬೇಕಾಗಿರುವ 12 ನೇ ತರಗತಿಯವರೆಗೆ ಅಧ್ಯಯನ ಮಾಡಿದ ಲಕ್ಷಾಂತರ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಿದ್ದಾರೆ.
ಉನ್ನತ ಶಿಕ್ಷಣ ಪಡೆದ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಸ್ವೀಪರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ಹೊರಗುತ್ತಿಗೆ ಸಂಸ್ಥೆ ಹರ್ಯಾಣ ಕೌಶಲ್ ರೋಜ್ಗರ್ ನಿಗಮ್ ಲಿಮಿಟೆಡ್ (Haryana Kaushal Rozgar Nigam Limited -HKRN) ಈ ನೇಮಕಾತಿ ಜವಾಬ್ದಾರಿ ಹೊತ್ತಿದೆ ಎನ್ನಲಾಗಿದೆ.
ಆದರೆ ರಾಜ್ಯದಲ್ಲಿನ ಈ ಪರಿಸ್ಥಿತಿ ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾಗಿದೆ. ಅಲ್ಲದೆ, ನೇಮಕಾತಿ ಹೊಣೆ ಹೊತ್ತಿರುವ HKRN ಸಂಸ್ಥೆ ಪಾರದರ್ಶಕತೆ ಪಾಲಿಸದ, ಸರಿಯಾಗಿ ಸಂಬಳಗಳನ್ನು ಕೊಡದ, ಉದ್ಯೋಗ ಅಭದ್ರತೆ ಕಾಡುವ ಮತ್ತು ವಿವಿಧ ವರ್ಗಗಳಿಗೆ ಮೀಸಲಾತಿ ನೀಡದಿರುವ ಆರೋಪಗಳನ್ನು ಈ ಹಿಂದೆ ಎದುರಿಸಿತ್ತು.
Click