ಅತ್ಯಾಚಾರಿಗಳಿಗೆ ಈ ರಾಜ್ಯದಲ್ಲಿ ಇನ್ನು ಮುಂದೆ ಜೀವಾವಧಿ ಶಿಕ್ಷೆ..! ಕೇಂದ್ರ ಕಾನೂನಿಗೆ ತಿದ್ದುಪಡಿ ತಂದ ದೇಶದ ಮೊದಲ ರಾಜ್ಯ..!

ನ್ಯೂಸ್‌ ನಾಟೌಟ್‌: ಮಮತಾ ಬ್ಯಾನರ್ಜಿ ಸರ್ಕಾರ ಜಾರಿಗೆ ತಂದಿರುವ ಅತ್ಯಾಚಾರ ವಿರೋಧಿ ಕಾನೂನು (Anti-rape law) ‘ಅಪರಾಜಿತಾ’ (Aparajita) ಎಂಬ ಮಸೂದೆಯನ್ನು ಪಶ್ಚಿಮ ಬಂಗಾಳ ವಿಧಾನಸಭೆ ಮಂಗಳವಾರ (ಸೆಪ್ಟಂಬರ್ 3) ಸರ್ವಾನುಮತದಿಂದ ಅಂಗೀಕರಿಸಿದೆ. ಮಸೂದೆಯನ್ನು ಈಗ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ಅವರಿಗೆ ಕಳುಹಿಸಲಾಗುವುದು ಮತ್ತು ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಒಪ್ಪಿಗೆಗಾಗಿ ಕಳುಹಿಸಲಾಗುವುದು ಎನ್ನಲಾಗಿದೆ. ಕಳೆದ ತಿಂಗಳು ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ಮೆಡಿಕಲ್ ಸೆಂಟರ್ ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಹತ್ಯೆಗೀಡಾದ 31 ವರ್ಷದ ಟ್ರೈನಿ ವೈದ್ಯೆಗೆ ಗೌರವ ಸಲ್ಲಿಸಲು ಈ ಮಸೂದೆ ಜಾರಿಗೆ ತರಲಾಗಿದೆ ಎಂದು ಹೇಳಿದರು. ಇದರೊಂದಿಗೆ ಮಕ್ಕಳ ಮೇಲಿನ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದಂತೆ ಕೇಂದ್ರ ಕಾನೂನುಗಳಿಗೆ ತಿದ್ದುಪಡಿಗಳನ್ನು ತಂದ ಮೊದಲ ರಾಜ್ಯವಾಗಿ ಬಂಗಾಳವು ಹೊರಹೊಮ್ಮಿದೆ.‘ಅಪರಾಜಿತಾ ಮಹಿಳಾ ಮತ್ತು ಮಕ್ಕಳ ಮಸೂದೆ (ಪಶ್ಚಿಮ ಬಂಗಾಳದ ಅಪರಾಧ ಕಾನೂನುಗಳು ಮತ್ತು ತಿದ್ದುಪಡಿ) 2024 ರ ಅನ್ವಯ, ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಗೆ ಮರಣದಂಡನೆಯನ್ನು ಒದಗಿಸುತ್ತದೆ ಎಂದು ಹೇಳಿದೆ. ಅತ್ಯಾಚಾರದ ಕ್ರಿಯೆಗಳು ಸಂತ್ರಸ್ತರ ಸಾವಿಗೆ ಕಾರಣವಾದರೆ ಅಥವಾ ಆಕೆಯನ್ನು ಪ್ರಜ್ಞಹೀನ ಸ್ಥಿತಿಯಲ್ಲಿ ಬಿಟ್ಟರೆ ಈ ಕಾನೂನು ಅನ್ವಯವಾಗುತ್ತದೆ. ಮಾತ್ರವಲ್ಲ ಅತ್ಯಾಚಾರದ ಅಪರಾಧಿಗಳಿಗೆ ಪೆರೋಲ್ ರಹಿತ ಜೀವಾವಧಿ ಶಿಕ್ಷೆಯನ್ನು ವಿಧಿಸುತ್ತದೆ.