ನ್ಯೂಸ್ ನಾಟೌಟ್: ಇಲ್ಲೊಂದು ಕುಟುಂಬ ಮನೆ ಮಗನಂತಿದ್ದ ತೀರಿ ಹೋದ ಬೆಕ್ಕನ್ನು ನೆನೆದು ಅದಕ್ಕೆ ಗೌರವ ನೀಡುವ ಸಲುವಾಗಿ ಅದರ ಪ್ರಥಮ ವರ್ಷದ ಪುಣ್ಯ ಸ್ಮರಣೆಯ ಫೋಟೋವನ್ನು ನ್ಯೂಸ್ ಪೇಪರ್ ಅಲ್ಲಿ ಪ್ರಿಂಟ್ ಮಾಡಿಸಿದ್ದಾರೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಬೆಕ್ಕಣ್ಣನ ಮೇಲಿರುವ ಮನೆಯವರ ಈ ಪ್ರೀತಿಯನ್ನು ಕಂಡು ಪ್ರಾಣಿ ಪ್ರಿಯರು ಭಾವುಕರಾಗಿದ್ದಾರೆ.
ಮುಂಬೈನಲ್ಲಿ ವಾಸವಿರುವ ಕೇರಳ ಮೂಲದ ಕುಟುಂಬವೊಂದು 2019 ರಲ್ಲಿ ತಮ್ಮ ಮುದ್ದು ಬೆಕ್ಕಿನ ಪುಣ್ಯ ಸ್ಮರಣೆಯ ಫೋಟೋವನ್ನು ನ್ಯೂಸ್ ಪೇಪರ್ನಲ್ಲಿ ಹಾಕಿಸಿದ್ದರು. ಈ ಕುರಿತ ಫೋಟೋವೊಂದು ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ. 18 ವರ್ಷಗಳ ಕಾಲ ಬದುಕಿದ್ದ ಚುಂಚು ನಾಯರ್ ಎಂಬ (Cat) ಬೆಕ್ಕು 2018 ರಲ್ಲಿ ಮರಣ ಹೊಂದಿದೆ. ಈ ಮುದ್ದು ಬೆಕ್ಕಿನ ನೆನಪಿಗಾಗಿ 2019 ರಲ್ಲಿ ಕುಟುಂಬಸ್ಥರು ಈ ಬೆಕ್ಕಿನ ಪ್ರಥಮ ವರ್ಷದ ಪುಣ್ಯ ಸ್ಮರಣೆಯ ಫೋಟೋವನ್ನು ದಿನ ಪ್ರತಿಕೆಯಲ್ಲಿ ಪ್ರಿಂಟ್ ಮಾಡಿಸಿದ್ದಾರೆ. ಈ ಕುರಿತ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಈಗ ಮತ್ತೆ ವೈರಲ್ ಆಗುತ್ತಿದೆ.
ಚುಂಚು ನಾಯರ್ ಬೆಕ್ಕಿನ ಪ್ರಥಮ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಅದರ ತಂದೆ, ತಾಯಿ, ಅಣ್ಣಂದಿರು, ಅಕ್ಕಂದಿರು ಹಾಗೂ ಅದರ ಪ್ರೀತಿಪಾತ್ರರು ನಾವು ನಿನ್ನನ್ನು ತುಂಬಾನೇ ಮಿಸ್ ಮಾಡುತ್ತಿದ್ದೇವೆ ಎಂದು ಫೋಟೋ ಹಾಕಿಸಿದ್ದಾರೆ.
Click