ನ್ಯೂಸ್ ನಾಟೌಟ್: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲಿ ತಾಯಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ (ಸೆ.14 ರಂದು) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗುಜರಾತ್ ನ ವಲ್ಸಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
5 ವರ್ಷದ ಮಗ ಗೌರಿಕ್ ಹುಟ್ಟುಹಬ್ಬವನ್ನು ಪೋಷಕರು ಅದ್ಧೂರಿಯಾಗಿ ಆಚರಿಸಿದ್ದಾರೆ. ಕುಟುಂಬದ ಸದಸ್ಯರು ಹಾಗೂ ಆತ್ಮೀಯರಿಗೆ ಬರ್ತ್ ಡೇ ಪಾರ್ಟಿಗೆ ಆಹ್ವಾನ ನೀಡಿದ್ದಾರೆ.
ಈ ವೇಳೆ ಗೌರಿಕ್ ಎಂಬ ಬಾಲಕನ ತಾಯಿ ಯಾಮಿನಿಬೆನ್ ಪತಿಯೊಂದಿಗೆ ವೇದಿಕೆಯಲ್ಲಿದ್ದರು. ಈ ಸಂಭ್ರಮದಲ್ಲಿ ಯಾಮಿನಿಬೆನ್ ಇದ್ದಕ್ಕಿದ್ದಂತೆ ಮಗುವನ್ನು ಗಂಡನಿಗೆ ಕೊಟ್ಟು ಅಲ್ಲೇ ಕುಸಿದು ಬಿದ್ದಿದ್ದಾರೆ.
ಕೂಡಲೇ ಯಾಮಿನಿಬೆನ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ವೈದ್ಯರು ಪರೀಕ್ಷಿಸಿ, ಯಾಮಿನಿಬೆನ್ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.