ನ್ಯೂಸ್ ನಾಟೌಟ್: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ನಾಲ್ವರು ಆರೋಪಿಗಳ ವಿರುದ್ಧ ಎನ್ಐಎ(NIA) ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ದಿನ ನಡೆದ “ವಿಫಲ ಐಇಡಿ ದಾಳಿ” ಯತ್ನ ಬಹಿರಂಗವಾದ ನಂತರ ಬಿಜೆಪಿ(BJP) ರಾಜ್ಯ ಕಚೇರಿ ಮತ್ತು ಸುತ್ತಮುತ್ತ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.
“ವಾಡಿಕೆಯಂತೆ, ಯಾವಾಗಲೂ ಸಿವಿಲ್ ಉಡುಪುಗಳಲ್ಲಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿತ್ತು. 25 ಜನರನ್ನು ಒಳಗೊಂಡ ಕರ್ನಾಟಕ ರಾಜ್ಯ ಮೀಸಲು ಪೊಲೀಸರ ತಂಡವೂ ಇರುತ್ತಿತ್ತು. ಈಗ ಭದ್ರತೆಯನ್ನು ಬಲಪಡಿಸಿದ್ದು ಕಟ್ಟುನಿಟ್ಟಾದ ಜಾಗರೂಕತೆಯನ್ನು ಹೊಂದಲು ಮತ್ತು ಕಚೇರಿ ಆವರಣದ ಎಲ್ಲಾ ಪ್ರವೇಶ ಮತ್ತು ನಿರ್ಗಮನ ಸ್ಥಳಗಳನ್ನು ಪರಿಶೀಲಿಸಲು ಅವರಿಗೆ ತಿಳಿಸಿದ್ದೇವೆ”ಎಂದು ಹಿರಿಯ ಪೊಲೀಸ್ ಅಧಿಕಾರಿ ಬುಧವಾರ(ಸೆ11) ತಿಳಿಸಿದ್ದಾರೆ.
ಮೆಟಲ್ ಡಿಟೆಕ್ಟರ್ಗಳು, ಡೋರ್ ಸ್ಕ್ಯಾನರ್ಗಳನ್ನು ಅಳವಡಿಸಲು ಮತ್ತು ಕಣ್ಗಾವಲಾಗಿ ಎಲ್ಲಾ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವಂತೆ ಪೊಲೀಸರು ಬಿಜೆಪಿಗೆ ಸೂಚನೆ ನೀಡಿದ್ದಾರೆ.
Click