ನ್ಯೂಸ್ ನಾಟೌಟ್ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಮನೆಯ ಬಾಗಿಲಿನ ಚಿಲಕ ಮುರಿದು ಮನೆಯಲ್ಲಿದ್ದ ಚಿನ್ನ – ಹಣ ಸೇರಿದಂತೆ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ದೋಚಿದ ಘಟನೆ ಬಂಟ್ವಾಳದ ಸಜೀಪ ಮುನ್ನುರು ಎಂಬಲ್ಲಿ ಸೋಮವಾರ(ಸೆ.23) ಸಂಜೆ ಬೆಳಕಿಗೆ ಬಂದಿದೆ.
ಸಜೀಪಮುನ್ನುರು ಗ್ರಾಮದ ನಿವಾಸಿಯಾಗಿರುವ ಜಯಲಕ್ಷ್ಮಿ ಅವರು ಸೆ.7 ರಂದು ಮನೆಗೆ ಬೀಗ ಹಾಕಿ ಪುತ್ತೂರು ಸೆಂಟ್ಯಾರ್ ಕೈಕಾರ್ ನಲ್ಲಿರುವ ತನ್ನ ತಾಯಿ ಮನೆಗೆ ತೆರಳಿದ್ದು ಸೆಪ್ಟೆಂಬರ್ 23ರ ಸಂಜೆ ಮನೆಗೆ ಹಿಂತಿರುಗಿ ಬಂದಾಗ, ಮನೆಯ ಬಾಗಿಲಿನ ಡೋರ್ ಲಾಕ್ ಮುರಿದಿತ್ತು, ಕಿಟಕಿಯ ಸರಳನ್ನು ಬಗ್ಗಿಸಿ ಯಾರೋ ಕಳ್ಳರು ಒಳಗೆ ನುಗ್ಗಿರುವುದು ಬೆಳಕಿಗೆ ಬಂದಿದೆ.
ಬಳಿಕ ಮನೆಯೊಳಗೆ ಹೋಗಿ ನೋಡಿದಾಗ ಗೋಡ್ರೇಜ್ ಮತ್ತು ಬೆಡ್ ರೂಂ ನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಬಿದ್ದಿರುವುದು ಕಂಡುಬಂದಿದೆ. ಅಲ್ಲದೆ ಗೋಡ್ರೇಜ್ ನಲ್ಲಿ ಇಟ್ಟಿದ್ದ ಸುಮಾರು 2 ½ ಪವನ್ ತೂಕದ 2 ಚಿನ್ನದ ಬಳೆಗಳು ಮತ್ತು 25000/- ನಗದನ್ನು ದೋಚಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 1,25,000 ಅಂದಾಜಿಸಲಾಗಿದೆ.
ಘಟನೆಗೆ ಸಂಬಂಧಿಸಿ ಮಹಿಳೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Click