ನ್ಯೂಸ್ ನಾಟೌಟ್ : ಒಬ್ಬ ವಿದೇಶಿ ನೀಲಿ ಚಿತ್ರ ನಟಿ ಮುಂಬೈಗೆ ಬಂದು ಇದೀಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ.
ಬಾಂಗ್ಲಾ ದೇಶದಲ್ಲಿ ಸಾಕಷ್ಟು ಕುಖ್ಯಾತಿ, ಪ್ರಖ್ಯಾತಿ ಗಳಿಸಿದ್ದ ನೀಲಿ ಚಿತ್ರ ನಟಿ ರಿಯಾ ಬಾರ್ಡೆ ಭಾರತದ ನಕಲಿ ಪಾಸ್ಪೋರ್ಟ್ ಬಳಸಿ ದೇಶದೊಳಗೆ ನುಸುಳಿದ್ದಳು ಎನ್ನಲಾಗಿದೆ. ಮುಂಬೈನಲ್ಲಿ ನೆಲೆಸಿದ್ದ ಈಕೆ, ತನ್ನ ಹೆಸರನ್ನು ಆರೋಹಿ ಬಾರ್ಡೆ ಎಂದು ಬದಲಿಸಿಕೊಂಡಿದ್ದಳು. ಮುಂಬೈ ಮಹಾ ನಗರದಿಂದ ಸುಮಾರು 50 ಕಿ. ಮೀ. ದೂರದಲ್ಲಿ ಇರುವ ಉಲ್ಲಾಸ್ ನಗರದಲ್ಲಿ ಆಕೆ ನೆಲೆಸಿದ್ದಳು. ಈ ಕುರಿತ ಖಚಿತ ಮಾಹಿತಿ ಪಡೆದ ಈ ಭಾಗದ ಹಿಲ್ ಲೇನ್ ಪೊಲೀಸರು, ಇದೀಗ ರಿಯಾ ಬಾರ್ಡೆಯನ್ನು ಬಂಧಿಸಿದ್ದಾರೆ.
ರಿಯಾ ಬಾರ್ಡೆ ಹಾಗೂ ಆಕೆಯ ಮೂವರು ಸಹಚರರಿಗೆ ಮಹಾರಾಷ್ಟ್ರದ ಅಮರಾವತಿಯ ನಿವಾಸಿಯೊಬ್ಬ ನಕಲಿ ದಾಖಲೆ ಒದಗಿಸಿದ್ದ ಎನ್ನಲಾಗಿದೆ. ಇವರನ್ನು ಆತನೇ ಭಾರತಕ್ಕೆ ಕರೆ ತಂದಿದ್ದ ಎನ್ನಲಾಗಿದೆ. ಇದೀಗ ಪೊಲೀಸರು ಎಲ್ಲರ ವಿರುದ್ಧವೂ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇದಲ್ಲದೆ ಈ ಪ್ರಕರಣ ಸಂಬಂಧ ಇನ್ನೂ ನಾಲ್ವರನ್ನು ಪೊಲೀಸರು ಹುಡುಕುತ್ತಿದ್ದಾರೆ.
Click