ನ್ಯೂಸ್ ನಾಟೌಟ್: ಅಮರ ಸುಳ್ಯದ ಸಂಗ್ರಾಮ 1837ರ ಇತಿಹಾಸದ ಸುತ್ತಲು ಬೆಳಕು ಚೆಲ್ಲುವಂತಹ ರಾಷ್ಟ್ರೀಯ ವಿಚಾರ ಸಂಕಿರಣವು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ (ಸೆ.2) ಚಾಲನೆ ದೊರಕಿತು. ಒಂದು ದಿನದ ಕಾರ್ಯಕ್ರಮವನ್ನು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು, ಪ್ರಸಾರಾಂಗ ಕನ್ನಡ ವಿಶ್ವ ವಿದ್ಯಾಲಯ ಹಂಪಿ ಹಾಗೂ ಬಂಟಮಲೆ ಅಕಾಡೆಮಿ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಅಧ್ಯಕ್ಷರಾಗಿರುವ ಡಾ| ಕೆ.ವಿ. ಚಿದಾನಂದ ವಹಿಸಿದರು. ಉದ್ಘಾಟನೆಯನ್ನು ಕನ್ನಡ ವಿಶ್ವವಿದ್ಯಾಲಯ ಹಂಪಿ ಕುಲಪತಿ ಡಾ. ಡಿ.ವಿ ಪರಮಮಲೆ ನೆರವೇರಿಸಿದರು. ನಿವೃತ್ತ ಪ್ರಾಧ್ಯಾಪಕ ಜೆಎನ್ ಯು ನವದೆಹಲಿ ಹಾಗೂ ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ದಿಕ್ಸೂಚಿ ಭಾಷಣವನ್ನು ಮಾಡಿದರು. ವಿಶೇಷವಾಗಿ ‘ಅಮರ ಸುಳ್ಯದ ಸಂಗ್ರಾಮ 1837’ ಡಾ. ವಿಜಯ್ ಪೂಣಚ್ಚ ತಂಬಂಡ ಅವರ ಕೃತಿ ಆಧಾರಿತವಾಗಿ ವಿಚಾರ ಸಂಕಿರಣ ಆಕರ್ಷಣೆಯಾಗಿತ್ತು.
ಕಾರ್ಯಕ್ರಮದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿ ಕೊಡಗು ಜಿಲ್ಲೆ ಮಡಿಕೇರಿ ಅಧ್ಯಕ್ಷ ಸದಾನಂದ ಮಾವಜಿ, ತಹಶೀಲ್ದಾರ್ ಜಿ ಮಂಜುನಾಥ್ ಉಪಸ್ಥಿತರಿದ್ದರು.
ಬಂಟಮಲೆ ಅಕಾಡೆಮಿ ಆಫ್ ನ್ಯಾಚುರಲ್ ಸೈನ್ಸಸ್ (ರಿ.) ಸುಳ್ಯ ಅಧ್ಯಕ್ಷ ಎ.ಕೆ ಹಿಮಕರ್, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ ಹಿರಿಯ ಪ್ರಾಧ್ಯಾಪಕ ಮತ್ತು ನಿರ್ದೇಶಕ ಮಾಧವ ಪೆರಾಜೆ, ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು, ಎನ್ ಎಂಸಿ ಪ್ರಾಂಶುಪಾಲರು ಡಾ. ರುದ್ರಕುಮಾರ್ ಎಂ.ಎಂ, ಎನ್ ಎಂಸಿ ಸುಳ್ಯ ಇದರ ಸಹಾಯಕ ಪ್ರಾಧ್ಯಾಪಕ ಹಾಗೂ ಕನ್ನಡ ಸಂಘದ ಸಂಚಾಲಕಿ ಡಾ.ಅನುರಾಧಾ ಕುರುಂಜಿ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ರತ್ನಾವತಿ ಡಿ, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕಿ ಡಾ. ಮಮತ ಕೆ, AOLE(R.) ಕಾರ್ಯದರ್ಶಿ ಹೇಮಾನಾಥ್ ಕೆವಿ, ಡಾ. ಎನ್.ಎ ಜ್ಞಾನೇಶ್, ಎನ್ ಎಮ್ ಪಿ ಯು ಪ್ರಾಂಶುಪಾಲೆ ಮಿಥಾಲಿ ಪಿ ರೈಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು. ಡಾ. ರುದ್ರಕುಮಾರ್ ಎಂ.ಎಂ ಅತಿಥಿಗಳನ್ನು ಸ್ವಾಗತಿಸಿದರು. ಡಾ ಸದಾನಂದ ಮಾವಜಿ ಪ್ರಸ್ತಾವಿಕ ಮಾತುಗಳನ್ನು ಆಡಿದರು. ಡಾ ಅನುರಾಧಾ ಕುರುಂಜಿ ಕಾರ್ಯಕ್ರಮ ನಿರ್ವಹಿಸಿದರು.
Click