ನ್ಯೂಸ್ ನಾಟೌಟ್ : ನಟ ದರ್ಶನ್ ಗೆ ಪ್ರಾಣ ಸಂಕಟ ಶುರುವಾಗಿದೆ. ಬಳ್ಳಾರಿ ಜೈಲಿನಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತಿವೆ. ಈ ನಡುವೆ ಕಾರಾಗೃಹ ಅಧಿಕಾರಿಗಳ ವಿರುದ್ಧವೇ ಇದೀಗ ದರ್ಶನ್ ಸಿಟ್ಟು ತಿರುಗಿದೆ.
ಈಗ ದರ್ಶನ್ ಗೆ ನಿರಂತರವಾಗಿ ಬೆನ್ನನೋವು ಬರುತ್ತಿದೆ. ಹೀಗಾಗಿ ಅವರು ಕುಳಿತುಕೊಳ್ಳಲು ಚೇರ್ ಗೆ ಮನವಿ ಮಾಡಿದ್ದರು. ಈ ಮನವಿ ಮಾಡಿ ವಾರಗಳೇ ಕಳೆದಿವೆ. ಆದಾಗ್ಯೂ ಜೈಲಾಧಿಕಾರಿಗಳು ಕುರ್ಚಿಯನ್ನು ನೀಡಿಲ್ಲ. ಇದರಿಂದ ದರ್ಶನ್ ಗರಂ ಆಗಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಗೆ ಪುಡಿ ರೌಡಿ ವಿಲ್ಸನ್ ಗಾರ್ಡನ್ ನಾಗನಿಂದ ಎಲ್ಲ ವ್ಯವಸ್ಥೆ ಕೂಡ ಸಿಕ್ಕಿತ್ತು. ಈ ವ್ಯವಸ್ಥೆಯಿಂದ ಅವರಿಗೆ ಯಾವುದೇ ತೊಂದರೆ ಆಗಿರಲಿಲ್ಲ. ಈ ವಿಚಾರ ಹೊರ ಬಂದ ನಂತರ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ದರ್ಶನ್ ಅವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ದರ್ಶನ್ ಚೇರ್ಗೆ ಬೇಡಿಕೆ ಇಟ್ಟಿದ್ದರು. ಈ ವಿಚಾರವನ್ನು ಅವರು ಕೋರ್ಟ್ ಎದುರು ಪ್ರಸ್ತಾಪ ಮಾಡಿದ್ದರು. ಈ ವೇಳೆ ಜಡ್ಜ್ ಅವರು ಕುರ್ಚಿ ನೀಡಲು ಸೂಚನೆ ಕೊಟ್ಟಿದ್ದರು. ಆದಾಗ್ಯೂ ಚೇರ್ ಏಕೆ ಕೊಟ್ಟಿಲ್ಲ ಎಂದು ಜೈಲಧಿಕಾರಿಗಳ ವಿರುದ್ಧ ದರ್ಶನ್ ಗರಂ ಆಗಿದ್ದಾರೆ. ದರ್ಶನ್ ಮಾತಿಗೆ ಖಡಕ್ಕಾಗಿ ಜೈಲಾಧಿಕಾರಿಗಳು ತೀರುಗೇಟು ನೀಡಿದ್ದಾರೆ.
‘ಕೋರ್ಟ್ನ ಅಧಿಕೃತ ಆದೇಶ ಬಂದ ಬಳಿಕವೇ ಚೇರ್ ಕೊಡಲಾಗುತ್ತದೆ’ ಎಂದು ಜೈಲಾಧಿಕಾರಿಗಳು ನೇರ ಮಾತಲ್ಲಿ ಹೇಳಿದ್ದಾರೆ. ಜೈಲಾಧಿಕಾರಿಗಳ ಮಾತಿಗೆ ದರ್ಶನ್ ಸಪ್ಪೆ ಮುಖ ಮಾಡಿಕೊಂಡಿದ್ದಾರೆ ಎಂದು ವರದಿ ಆಗಿದೆ. ಸದ್ಯ ದರ್ಶನ್ಗೆ ಬೆಂಗಳೂರಿನ ಜೈಲಿನಲ್ಲಿ ಕಷ್ಟಗಳು ಬಿಟ್ಟು ಬಿಡದೆ ಕಾಡುತ್ತಿವೆ.
ವಿಚಾರಣಾದೀನ ಕೈದಿಗಳಿಗೆ ಕೆಲ ಅವಶ್ಯಕ ವಸ್ತುಗಳನ್ನ ಕೊಡಬುದಾದ ನಿಯಮಗಳಿವೆ. ಆದರೆ ಎಲ್ಲದಕ್ಕೂ ಕೋರ್ಟ್ ಆದೇಶ ಬೇಕು ಎಂದು ಬಳ್ಳಾರಿ ಸೆಂಟ್ರಲ್ ಜೈಲಾಧಿಕಾರಿಗಳು ಹೇಳುತ್ತಿದ್ದಾರೆ. ಬಳ್ಳಾರಿ ಸೆಂಟ್ರಲ್ ಜೈಲಿನ ಕಠಿಣತೆಗೆ ಆರೋಪಿ ದರ್ಶನ್ ಹೈರಾಣಾವಾಗಿದ್ದಾರೆ.