ನ್ಯೂಸ್ ನಾಟೌಟ್: ಇಂದೋರ್ ನಿಂದ 32 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಪೊಲೀಸರು, ಆತನಿಂದ 294 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡ ಘಟನೆ ಸೋಮವಾರ(ಸೆ.23) ನಡೆದಿದೆ.
ಈ ಮೊಬೈಲ್ ಫೋನ್ ಗಳನ್ನು ಅಂತಾರಾಷ್ಟ್ರೀಯ ಕಳ್ಳಸಾಗಣೆ ಜಾಲದ ಭಾಗವಾಗಿ ನೇಪಾಳಕ್ಕೆ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.
ಮಾನ್ಯತೆ ಹೊಂದಿರುವ ಬಿಲ್ ಗಳಿಲ್ಲದೆ ಸಾಗಣೆಯಾಗುತ್ತಿದ್ದ ಈ ಮೊಬೈಲ್ ಫೋನ್ ಗಳ ಒಟ್ಟಾರೆ ಮೌಲ್ಯ 35 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಅಕ್ರಮ ಸಾಗಾಣಿಕೆಯ ಸುಳಿವನ್ನು ಆಧರಿಸಿ ಪೊಲೀಸರು ಸಂದೀಪ್ ಕಶ್ಯಪ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಕಶ್ಯಪ್ ನನ್ನು ಈ ಕೆಲಸಕ್ಕೆ ನೇಮಿಸಿಕೊಂಡಿದ್ದ ವಾಸ್ವಾನಿ ಅಲಿಯಾಸ್ ಜಾನಿ ಎಂಬ ಮತ್ತೊಬ್ಬ ಕಳ್ಳ ಸಾಗಣೆ ಆರೋಪಿ, ಬೃಹತ್ ಮೊತ್ತದ ಕಮಿಷನ್ ನೀಡುವ ಆಮಿಷವೊಡ್ಡಿದ್ದ ಎಂದು ಹೇಳಲಾಗಿದೆ.
ಮೇಲ್ನೋಟದ ಸಾಕ್ಷ್ಯಾಧಾರಗಳ ಪ್ರಕಾರ, ಕಶ್ಯಪ್ ಬಿಲ್ ರಹಿತವಾಗಿ 60 ಮೊಬೈಲ್ ಫೋನ್ ಗಳನ್ನು ಈಗಾಗಲೇ ನೇಪಾಳಕ್ಕೆ ಕಳ್ಳಸಾಗಣೆ ಮಾಡಿರುವುದು ಕಂಡು ಬಂದಿದ್ದು, ಅವುಗಳನ್ನು ಈ ಹಿಂದೆ ವಾಸ್ವಾನಿಯ ಸೂಚನೆಯ ಮೇರೆಗೆ ಮಾರಾಟ ಮಾಡಿದ್ದಾನೆ ಎನ್ನಲಾಗಿದೆ.
ಈ ಮೊಬೈಲ್ ಫೋನ್ ಗಳನ್ನು ದೇಶದ ವಿವಿಧ ಭಾಗಗಳಿಂದ ಸುಲಿಗೆ ಅಥವಾ ಕಳ್ಳತನ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
Click