ನ್ಯೂಸ್ ನಾಟೌಟ್: ಸಿದ್ದರಾಮಯ್ಯ ರಾಜೀನಾಮೆ ಕೊಟ್ರೆ ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎನ್ನುವ ಅಭಿಯಾನ ಶುರುವಾಗಿದೆ. ಈ ಬಗ್ಗೆ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಸತೀಶ್ ಜಾರಕಿಹೊಳಿಗಿಂತ ನಾನು ಸಿನಿಯರ್ ಇದೀನಿ ಎಂಬ ಎಂಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜಾರಕಿಹೊಳಿ, ಸಿಎಂ ಸಿದ್ದರಾಮಯ್ಯ ಇದ್ದಾರೆ ಅವರೇ ಮುಂದುವರೆಯುತ್ತಾರೆ. ನಾವೆಲ್ಲೂ ಸಿಎಂ ಸ್ಥಾನವನ್ನು ಕ್ಲೆಮ್ ಮಾಡಿಲ್ಲ. ಇದರಲ್ಲಿ ಗುದ್ದಾಟ, ಕುಸ್ತಿ ಮಾಡೋ ಅವಶ್ಯಕತೆ ಇಲ್ಲ. ಅನೇಕರು ಈಗಾಗಲೇ ಆಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.
ಇನ್ನು ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ ಎಂದಿರುವ ಸತೀಶ್ ಜಾರಕಿಹೊಳಿ, 2028ಕ್ಕೆ ಸಿಎಂ ಆಗುವ ತಯಾರಿ ಇದೆ ನಮ್ಮದು. ಅಲ್ಲಿಯವರೆಗೆ ಅಭಿಮಾನಿಗಳು ಕಾಯಬೇಕು. ನಾನು ಸಿಎಂ ಆಗುವ ವಿಚಾರದ ಬಗ್ಗೆ ಮುಂದೆ ನೋಡೋಣ. 2028ಕ್ಕೆ ಈ ವಿಚಾರದ ಬಗ್ಗೆ ನೋಡೋಣ. ಸದ್ಯ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುತ್ತಾರೆ. ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯುವ ನಂಬಿಕೆ ಇದೆ. ಆರ್.ವಿ.ದೇಶಪಾಂಡೆ, ಪರಮೇಶ್ವರ್, ಡಿ.ಕೆ.ಶಿವಕುಮಾರ್. ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್ ಹಿರಿಯರಿದ್ದಾರೆ. ಎಲ್ಲರಿಗೂ ಮುಖ್ಯಮಂತ್ರಿ ಆಗುವ ಅಸೆ ಇದ್ದೇ ಇರುತ್ತೆ. ಸದ್ಯ ಈ ಪ್ರಶ್ನೆ ಉದ್ಭವಿಸುವುದಿಲ್ಲ, ಮುಂದೇನಾಗುತ್ತೋ ನೋಡೋಣ ಎಂದಿದ್ದಾರೆ.
ಸಿದ್ದರಾಮಯ್ಯ ಪರ ನ್ಯಾಯ ಸಿಗುತ್ತೆ ಎನ್ನುವ ನಂಬಿಕೆ ಇದೆ. ಸಿಎಂ ಬದಲಾವಣೆ ಪ್ರಶ್ನೆ ಬರಲ್ಲ ಎನ್ನುವ ವಿಶ್ವಾಸ ಇದೆ. ಈಗ ಸಿಎಂ ಕನಸು ಕಂಡಿಲ್ಲ. 2028ಕ್ಕೆ ಸಿಎಂ ಆಗುವ ತಯಾರಿ ಇದೆ ನಮ್ಮದು. ಅಲ್ಲಿಯವರೆಗೆ ಅಭಿಮಾನಿಗಳು ಕಾಯಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
Click