13 ವರ್ಷದ ಬಾಲಕನ ಪ್ರಾಣ ತೆಗೆದ ಬಲೂನ್..! ಮಕ್ಕಳಿಗೆ ಬಲೂನ್ ಕೊಡಿಸೋ ಮುನ್ನ ಇದನ್ನೊಮ್ಮೆ ಓದಿ..!

ನ್ಯೂಸ್ ನಾಟೌಟ್: ಸಣ್ಣ ಬಲೂನ್ 13 ವರ್ಷದ ಮಗುವಿನ ಜೀವವನ್ನು ಬಲಿ ಪಡೆದ ಘಟನೆ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ನಡೆದಿದೆ. 2 ದಿನಗಳ ಕಾಲ ಆಸ್ಪತ್ರೆಯಲ್ಲಿ ಒದ್ದಾಡಿ ಸಾವನ್ನಪ್ಪಿದ್ದಾನೆ.13 ವರ್ಷದ ವಿವೇಕ್ ಕುಮಾರ್ ಸಿದ್ಪುರಘಡದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ. ಗುರುವಾರ ವಿವೇಕ್ ಶಾಲೆ ಮುಗಿಸಿ ಮನೆಗೆ ತೆರಳಿದ್ದ. ಈ ವೇಳೆ ಶಾಲೆಯ ಗೇಟ್‌ನಲ್ಲಿ ಬಲೂನ್ ಊದಲು ಪ್ರಾರಂಭಿಸಿದ್ದು, ಗಾಳಿ ತುಂಬುತ್ತಿದ್ದಂತೆಯೇ ಏಕಾಏಕಿ ಬಲೂನ್‌ನಿಂದ ಗಾಳಿ ಹೊರಬಂದಿದೆ ಮತ್ತು ಬಲೂನ್ ವಿವೇಕ್‌ನ ಬಾಯಿಯೊಳಗೆ ಹೋಗಿದೆ, ಗಾಳಿಯೋ ಒಳ ಹೋಗಿ ಉಸಿರುಕಟ್ಟಿದಂತಾಗಿದೆ. ಈ ವೇಳೆ ಈ ಬಲೂನ್ ವಿವೇಕ್ ನ ಕುತ್ತಿಗೆಗೆ ಸಿಲುಕಿದೆ. ಘಟನೆ ಬಳಿಕ ಶಾಲೆಯ ಶಿಕ್ಷಕರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇಲ್ಲಿ ಪ್ರಥಮ ಚಿಕಿತ್ಸೆಯ ನಂತರ ಮಗುವನ್ನು ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿರುವ ಅಮನ್‌ದೀಪ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ತಂಡ ವಿವೇಕ್ ಅವರ ಕುತ್ತಿಗೆಯಿಂದ ಬಲೂನ್ ಅನ್ನು ಹೊರತೆಗೆದರು, ಆದರೆ ಮಗುವಿನ ಆರೋಗ್ಯವು ಗಂಭೀರವಾಗಿತ್ತು. ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ವಿವೇಕ್ ಕೊನೆಯುಸಿರೆಳೆದಿದ್ದಾರೆ. ವಿವೇಕ್ ಅತ್ಯಂತ ಬಡ ಕುಟುಂಬದಿಂದ ಬಂದ ಬಾಲಕ. ಮಗುವಿನ ಸಾವಿನಿಂದ ಕುಟುಂಬಸ್ಥರು ಕಂಬನಿ ಮಿಡಿದಿದ್ದು, ಶಾಲೆ ಹಾಗೂ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ತಾಯಿ ಗೃಹಿಣಿಯಾಗಿದ್ದು, ಅಕ್ಕ 12ನೇ ತರಗತಿಯಲ್ಲಿ ಓದುತ್ತಿದ್ದಾರೆ. Click