- +91 73497 60202
- [email protected]
- November 22, 2024 7:13 AM
ವಯನಾಡಿನಲ್ಲಿ ಭೂ-ಕಂಪನದ ಭೀತಿ..! 20 ಕಿಲೋಮೀಟರ್ ದೂರದಲ್ಲಿ ನಿಗೂಢ ಶಬ್ದ..!
ನ್ಯೂಸ್ ನಾಟೌಟ್: ಭೂಕುಸಿತದ ಕರಾಳತೆ ಮಾಸುವ ಮುನ್ನವೇ ವಯನಾಡಿಗೆ ಈಗ ಭೂಕಂಪದ (Wayanad Earthquake) ಭೀತಿ ಎದುರಾಗಿದೆ. ಆ.9ರ ಬೆಳಗ್ಗೆ 10:15 ಕ್ಕೆ ವಯನಾಡಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ವರದಿ ತಿಳಿಸಿದೆ. ಇತ್ತೀಚೆಗೆ ಭೂಕುಸಿತ ಸಂಭವಿಸಿದ ಚೂರಲ್ಮಲಾ – ಮುಂಡಕ್ಕೈ ಪ್ರದೇಶಗಳಿಂದ ಸುಮಾರು 15 ರಿಂದ 20 ಕಿಲೋಮೀಟರ್ ದೂರದಲ್ಲಿರುವ ಅಂಬಲವಾಯಲ್-ಎಡಕಲ್ ಪ್ರದೇಶಗಳಲ್ಲಿ ಬೆಳಗ್ಗೆ ಗುಡುಗು ಸದ್ದಿನಂತೆ ಶಬ್ದ ಕೇಳಿಸಿತು ಎನ್ನಲಾಗಿದೆ.ಪಕ್ಕದ ಕೋಝಿಕ್ಕೋಡ್ ಮತ್ತು ಪಾಲಕ್ಕಾಡ್ ಜಿಲ್ಲೆಗಳ ಭಾಗಗಳಿಂದ ಇದೇ ರೀತಿಯ ಶಬ್ದಗಳು ಕೇಳಿಬಂದಿವೆ ಎಂದು ವರದಿಯಾಗಿದೆ. ಈ ಪ್ರದೇಶದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಪರಿಹಾರ ಶಿಬಿರದಲ್ಲಿ ಹಲವು ಕುಟುಂಬಗಳು ಆಶ್ರಯ ಪಡೆದಿವೆ. ಆರಂಭದಲ್ಲಿ ಗುಡುಗು ಇರಬಹುದು ಎಂದು ಹಲವರು ಭಾವಿಸಿದ್ದರು. ಆದರೆ ಶಬ್ದವು ಭೂಮಿಯ ಮೇಲ್ಮೈಯಿಂದ ಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ ಎನ್ನಲಾಗಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ