ನ್ಯೂಸ್ ನಾಟೌಟ್: ಧಾರ್ಮಿಕ ಉತ್ಸವಕ್ಕಾಗಿ ಅಳವಡಿಸಲಾಗಿದ್ದ ಬ್ಯಾನರ್ ನಲ್ಲಿ ಮಾಜಿ ನೀಲಿಚಿತ್ರ ತಾರೆ ಮಿಯಾ ಖಲೀಫಾ ಚಿತ್ರ ಪ್ರದರ್ಶನ ಮಾಡಿದ ಘಟನೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ನಡೆದಿದೆ.
ತಮಿಳುನಾಡಿನಾದ್ಯಂತ ಇರುವ ದೇವಾಲಯಗಳಲ್ಲಿ ‘ಅಮ್ಮನ್’ ದೇವಿಯನ್ನು ಪೂಜಿಸುವ ‘ಆದಿ’ ಹಬ್ಬಕ್ಕಾಗಿ ಈ ಹೋರ್ಡಿಂಗ್ ಅನ್ನು ಅಳವಡಿಸಲಾಗಿತ್ತು. ಹಲವಾರು ದಿನಗಳವರೆಗೆ ನಡೆಯುವ ಉತ್ಸವದಲ್ಲಿ ಭಕ್ತರು ಭಾಗವಹಿಸುತ್ತಾರೆ.
ಈ ಬೃಹತ್ ಹಬ್ಬದ ಭಾಗವಾಗಿ, ಕುರುವಿಮಲೈನಲ್ಲಿರುವ ನಾಗತಮ್ಮನ್ ಮತ್ತು ಸೆಲ್ಲಿಯಮ್ಮನ್ ದೇವಾಲಯಗಳಲ್ಲಿ ಹಬ್ಬದ ದೀಪಗಳ ಜತೆಗೆ ಹೋರ್ಡಿಂಗ್ಗಳನ್ನು ಹಾಕಲಾಗಿದ್ದು, ಅದರಲ್ಲಿ ಮಿಯಾ ಖಲೀಫಾ ಚಿತ್ರವು ದೇವತೆಗಳ ಚಿತ್ರಗಳೊಂದಿಗೆ ಕಾಣಿಸಿಕೊಂಡಿದ್ದು ಹೋರ್ಡಿಂಗ್ ನ ಫೋಟೋ ವೈರಲ್ ಆಗಿದೆ. ಮಿಯಾ ಖಲೀಫಾ ಚಿತ್ರವನ್ನು ತಲೆಯ ಮೇಲೆ ಹಾಲಿನ ಬಿಂದಿಗೆ ಒಯ್ಯುತ್ತಿರುವಂತೆ ಕಾಣುವಂತೆ ಮಾರ್ಪಡಿಸಲಾಗಿತ್ತು. ಚಿತ್ರ ವೈರಲ್ ಆದ ನಂತರ ಭಾರೀ ಟೀಕೆ ವ್ಯಕ್ತವಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಅದನ್ನು ತೆಗೆದುಹಾಕಿದ್ದಾರೆ ಎಂದು ವರದಿ ತಿಳಿಸಿದೆ.
Click