ಟೆಕ್ಕಿಯೊಬ್ಬ 8 ದಿನಗಳಿಂದ ನಿಗೂಢ ನಾಪತ್ತೆ..! ಹುಡುಕಿಕೊಡುವಂತೆ ‘ಎಕ್ಸ್’​ ಮೂಲಕ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ ಪತ್ನಿ..!

ನ್ಯೂಸ್ ನಾಟೌಟ್ : ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್​ನ ಕಂಪನಿಯೊಂದರಲ್ಲಿ ಟೆಕ್ಕಿಯಾಗಿರುವ ವಿಪಿನ್ ಗುಪ್ತಾ (37) ಕಾಣೆಯಾಗಿದ್ದಾರೆ ಎನ್ನಲಾಗಿದೆ. ಕೈಯಲ್ಲಿ ಟಿ ಶರ್ಟ್​ ಹಿಡಿದು ತನ್ನ ಕವಾಸಕಿ ಬೈಕ್​ ತೆಗೆದುಕೊಂಡು ಮನೆ ಬಿಟ್ಟಿದ್ದ ಪತಿ ಎಂಟು ದಿನ ಕಳೆದರೂ ಮನೆಗೆ ಬಂದಿಲ್ಲ, ಹುಡುಕಿಕೊಡಿ ಎಂದು ವಿಪಿನ್ ಪತ್ನಿ ನಗರ ಪೊಲೀಸ್ ಆಯುಕ್ತರಿಗೆ ಎಕ್ಸ್​ ಖಾತೆ ಮೂಲಕ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ. ಇನ್ನು ಮನೆ ಬಿಟ್ಟ ಕೆಲವೇ ನಿಮಿಷಗಳಲ್ಲಿ ಟೆಕ್ಕಿ 1 ಲಕ್ಷದ 80 ಸಾವಿರ ಹಣ ಡ್ರಾ ಮಾಡಿಕೊಂಡಿದ್ದು ಯಾರಾದರೂ ಬ್ಲಾಕ್ ಮೇಲ್ ಮಾಡಿ ಹಣ ಪಡೆದು ಕಿಡ್ನಾಪ್ (Kidnap) ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.ಕಳೆದ ಮೂರು ವರ್ಷದಿಂದ ಬೆಂಗಳೂರಿನಲ್ಲಿ ಪತ್ನಿ, ಮಕ್ಕಳ ಜೊತೆ ವಾಸವಿದ್ದ ವಿಪಿನ್ ಲಕ್ನೋ ಮೂಲದವರು ಎನ್ನಲಾಗಿದೆ. ಕಳೆದ 8 ದಿನಗಳ ಹಿಂದೆ ಅಂದರೆ ಇದೇ ತಿಂಗಳ 04 ರಂದು ಮಧ್ಯಾಹ್ನ 12:44ಕ್ಕೆ ಏಕಾಏಕಿ ಪತ್ನಿಗೂ ಒಂದು ಮಾತು ತಿಳಿಸದೆ ಕೈಯಲ್ಲಿ ಟಿ ಶರ್ಟ್ ಹಿಡಿದು ಮನೆಯಿಂದ ಹೊರಗೆ ಹೆಜ್ಜೆ ಹಾಕಿದ ವಿಪಿನ್ ಬಳಿಕ ತನ್ನ ಕವಾಸಕಿ ಬೈಕ್ ತೆಗೆದುಕೊಂಡಿ ಆಚೆ ಹೋಗಿದ್ದರು. ನಿನ್ನೆ ಬರುತ್ತಾರೆ ಎಂದು ಎಷ್ಟೋ ಕಾದರೂ ಪತಿ ಹಿಂದಿರುಗಿಲ್ಲ. ಅಲ್ಲದೆ ವಿಪಿನ್ ಮನೆ ಬಿಟ್ಟ ಕೆಲವೇ ನಿಮಿಷಗಳಲ್ಲಿ 1 ಲಕ್ಷ 80 ಸಾವಿರ ಹಣ ಡ್ರಾ ಆಗಿದೆ. ಆ ಬಳಿಕ ಟೆಕ್ಕಿ ವಿಪಿನ್ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಪತ್ನಿ ತಿಳಿಸಿದ್ದಾರೆ. ವಿಪಿನ್ ಕಳೆದ ಎಂಟು ದಿನಗಳಿಂದ ಮನೆಗೆ ಬಂದಿಲ್ಲ. ಇದರಿಂದ ಪತ್ನಿ ಹಾಗೂ ಇಬ್ಬರು ಮಕ್ಕಳು ಕಂಗಾಲಾಗಿದ್ದಾರೆ. ಸದ್ಯ ಈಗ ನಗರ ಪೊಲೀಸ್ ಆಯುಕ್ತರಿಗೆ ಎಕ್ಸ್​ ಖಾತೆ ಮೂಲಕ ಪತಿ ಹುಡುಕಿಕೊಂಡುವಂತೆ ಮನವಿ ಮಾಡಿದ್ದಾರೆ. Click