ನ್ಯೂಸ್ ನಾಟೌಟ್: ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್ ಬರುವ ಬಗ್ಗೆ ಕಳೆದ ಒಂದೂವರೆ ತಿಂಗಳಿನಿಂದ ನಾಸಾ ಪ್ರಯತ್ನ ಪಡುತ್ತಿದೆ. ಆದರೆ ಇದೀಗ ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುವುದು ಮತ್ತಷ್ಟು ವಿಳಂಬವಾಗಲಿದೆ, 2025ರ ಫೆಬ್ರವರಿಯಲ್ಲಿ ಹಿಂತಿರುಗಬಹುದು ಎಂದು ನಾಸಾ ತಿಳಿಸಿದೆ.
ಜೂನ್ 5 ರಂದು ಅಮೆರಿಕದ ಮೂಲದ ಬುಚ್ ವಿಲ್ಮೋರ್ ಜೊತೆ ಬಾಹ್ಯಾಕಾಶಯಾನ ಕೈಗೊಂಡಿದ್ದ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ 52 ದಿನವಾದರೂ ಭೂಮಿಗೆ ಮರಳಿಲ್ಲ. ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಮ್ಮ ಸಹೋದ್ಯೋಗಿ ಗಗನಯಾತ್ರಿ ಬುಚ್ ವಿಲ್ಮೋರ್ ಅವರೊಂದಿಗೆ ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ, ಸುನಿತಾ ವಿಲಿಯನ್ಸ್ ಉಳಿದುಕೊಂಡಿದ್ದಾರೆ ಎನ್ನಲಾಗಿದೆ.
ಬಾಹ್ಯಾಕಾಶ ನೌಕೆಯಲ್ಲಿ ಬಹುತಾಂತ್ರಿಕ ಸಮಸ್ಯೆ ಉಂಟಾಗಿದೆ. ಹೀಗಾಗಿ ಈ ಸಮಸ್ಯೆಗಳೆಲ್ಲವನ್ನು ಸರಿಪಡಿಸಿದ ಬಳಿಕವಷ್ಟೇ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ವಾಪಸ್ ಭೂಮಿಗೆ ಬರಲು ಸಾಧ್ಯ. ಬಾಹ್ಯಾಕಾಶ ನೌಕೆ ಬೋಯಿಂಗ್ ಸ್ಟಾರ್ ಲೈನರ್ ನಲ್ಲಿನ ತಾಂತ್ರಿಕ ಸಮಸ್ಯೆ ಬಗೆಹರಿದ ಬಳಿಕ 2025ರ ಫೆಬ್ರವರಿಯಲ್ಲಿ ಈ ಇಬ್ಬರೂ ಗಗನಯಾತ್ರಿಗಳು ಭೂಮಿಗೆ ಮರಳಬಹುದು ಎಂದು ತಿಳಿಸಿದೆ.
Click